Tuesday, October 13, 2026
Homeತಾಜಾ ಸುದ್ದಿಹಾಸನ ಜಿಲ್ಲೆ ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕುಸಿತ ಪ್ರಕರಣ : ರಸ್ತೆಯ ತಾತ್ಕಾಲಿಕ...

ಹಾಸನ ಜಿಲ್ಲೆ ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕುಸಿತ ಪ್ರಕರಣ : ರಸ್ತೆಯ ತಾತ್ಕಾಲಿಕ ದುರಸ್ತಿ ಕಾರ್ಯ ಆರಂಭ

- Advertisement -
- Advertisement -

ಹಾಸನ:  ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಯಲ್ಲಿ  ಕುಸಿತಗೊಂಡಿರುವ ರಸ್ತೆಯನ್ನು  ತಾತ್ಕಾಲಿಕವಾಗಿ ದುರಸ್ತಿ ಮಾಡಲು ಕೆಲಸ ಆರಂಭವಾಗಿದೆ. ಮರಳು ಚೀಲ ಹಾಕಿ ಮತ್ತೆ ರಸ್ತೆ ಕುಸಿಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ರಸ್ತೆ ಮತ್ತೊಂದು ಬದಿಯ‌ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಲು ಕಾಮಗಾರಿ ನಡೆಯುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ನಿನ್ನೆ ರಾತ್ರಿಯಿಂದಲೂ ವಾಹನಗಳು ಸಾಲುಗಟ್ಟಿ ನಿಂತಿವೆ. ಬಿಸಿಲೆ ಹಾಗು ಚಾರ್ಮಾ ಡಿ‌ಘಾಟ್ ಮೂಲಕ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇನ್ನು ಕಾಮಗಾರಿ ಹಿನ್ನೆಲೆ ಎರಡು ದಿನ ಅಧಿಕಾರಿಗಳು ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ತಾತ್ಕಾಲಿಕ ದುರಸ್ತಿ ಆದ ಬಳಿಕ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲು ತಯಾರಿ ನಡೆಸಲಾಗುತ್ತಿದೆ. ಮಳೆಯ ನಡುವೆಯು ರಸ್ತೆ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ.

- Advertisement -

Latest News

error: Content is protected !!