Thursday, June 25, 2026
Homeಕರಾವಳಿಇನ್ಮೇಲೆ ಚಾರ್ಮಾಡಿ ಘಾಟ್ ನಲ್ಲಿ ಮೋಜು ಮಸ್ತಿ ಮಾಡಿದ್ರೆ ಅಷ್ಟೇ....

ಇನ್ಮೇಲೆ ಚಾರ್ಮಾಡಿ ಘಾಟ್ ನಲ್ಲಿ ಮೋಜು ಮಸ್ತಿ ಮಾಡಿದ್ರೆ ಅಷ್ಟೇ….

- Advertisement -
- Advertisement -

ಬೆಳ್ತಂಗಡಿ: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಸ್ವರ್ಗಲೋಕವೇ ಧರೆಗೆ ಇಳಿದಂತೆ ಭಾಸವಾಗುತ್ತಿದೆ. ಪುಟ್ಟ ಪುಟ್ಟ ನೂರಾರು ಜಲಪಾತಗಳು ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬದೂಟವನ್ನೇ ಉಣ ಬಡಿಸುತ್ತಿದೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಕೆಲವು ಪ್ರವಾಸಿಗರು ಬಂದು ಪ್ರಕೃತಿಯ ಸೌಂದರ್ಯವನ್ನು ಸವಿದು ವಾಪಾಸ್ಸಾದ್ರೆ ಇನ್ನೂ ಕೆಲವರು ಮೋಜು ಮಸ್ತಿ ಮಾಡಿ ತೊಂದರೆ ನೀಡುತಿದ್ದಾರೆ. ಇಂತಹವರ ಮೇಲೆ ಕಣ್ಣಿಡಲು ದಕ್ಷಿಣ ಕನ್ನಡ ಜಿಲ್ಲೆಯ ಹೈವೇ ಪಟ್ರೊಲ್ ಪೊಲೀಸ್ ವಾಹನ ಚಾರ್ಮಾಡಿ ಘಾಟ್ ನಲ್ಲಿ ಬೀಡು ಬಿಟ್ಟಿದೆ. ಆ ಮೂಲಕ ಮೋಜು ಮಸ್ತಿ ಮಾಡುವವರ ಮೇಲೆ ನಿಗಾ ವಹಿಸಿದೆ.

- Advertisement -

Latest News

error: Content is protected !!