Saturday, June 6, 2026
HomeUncategorizedಬಂಟ್ವಾಳ: ಮನೆ ಮೇಲೆ ಕುಸಿದ ತಡೆಗೋಡೆ ; ಇಬ್ಬರಿಗೆ ಗಾಯ

ಬಂಟ್ವಾಳ: ಮನೆ ಮೇಲೆ ಕುಸಿದ ತಡೆಗೋಡೆ ; ಇಬ್ಬರಿಗೆ ಗಾಯ

- Advertisement -
- Advertisement -

ಬಂಟ್ವಾಳ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಂಟ್ವಾಳ- ಮೂಡಬಿದಿರೆ ರಸ್ತೆಯ ವಿದ್ಯಾಗಿರಿಯಲ್ಲಿ ಮನೆಯೊಂದು ಕುಸಿದಿದ್ದು, ಘಟನೆಯಲ್ಲಿ ನವೀನ್ ಹಾಗೂ ಅವರ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ಮನೆ ಪಕ್ಕದ ಗುಡ್ಡಯ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆ ಕುಸಿದು ಮನೆಯ ಮೇಲೆಯೇ ಬಿದ್ದಿದೆ. ಪರಿಣಾಮ ಮನೆಯ ಗೋಡೆ, ಮೇಲ್ಛಾವಣಿ‌ಗೆ ಹಾಗೂ ಮನೆಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿದೆ.

- Advertisement -

Latest News

error: Content is protected !!