- Advertisement -
- Advertisement -
ಸುರತ್ಕಲ್: ಬುಧವಾರ ಸುರಿದ ಭಾರಿ ಮಳೆಗೆ ಸುರತ್ಕಲ್ ಹೊರವಲಯದ ಚೇಳ್ಯಾರು ಎಂಬಲ್ಲಿ ಮಣ್ಣು ಕುಸಿದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಜೊತೆಗೆ ಅದರಲ್ಲೇ ಜೋಡಣೆಯಲ್ಲಿರುವ ಐದು ವಿದ್ಯುತ್ ಸರಬರಾಜು ಕಂಬಗಳು ಧರೆಗೆ ಉರುಳಿವೆ.

ಸದ್ಯ ಚೇಳ್ಯಾರು ಕಾಲನಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ರಸ್ತೆ ಅಗಲೀಕರಣದ ಸಂಧರ್ಭದಲ್ಲಿ ವಿದ್ಯುತ್ ಕಂಬದ ವ್ಯವಸ್ಥೆ ದುರ್ಬಲಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ರಾತ್ರಿ ವೇಳೆ ಈ ಘಟನೆ ನಡೆದಿದ್ದರಿಂದ ಅಷ್ಟೇನು ಮಾನ ಹಾನಿಯಾಗಿಲ್ಲ, ಹಗಲಲ್ಲಿ ಈ ಘಟನೆ ನಡೆದಿದ್ದರೆ ಅಪಾಯವಾಗುತ್ತಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
- Advertisement -