Friday, June 5, 2026
Homeಕರಾವಳಿವಿಟ್ಲದಲ್ಲಿ ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ, ಮನೆಗೆ ಹಾನಿ

ವಿಟ್ಲದಲ್ಲಿ ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ, ಮನೆಗೆ ಹಾನಿ

- Advertisement -
- Advertisement -

ವಿಟ್ಲ: ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆ ಭಾಗಶಃ ಹಾನಿಗೊಂಡ ಘಟನೆ ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿ ಸಂಭವಿಸಿದೆ.

ವೀರಕಂಬ ಕಲ್ಮಲೆ ಜಯಂತಿ ಮತ್ತು ರಘುನಾಥ ಶೆಟ್ಟಿ ದಂಪತಿ ಮನೆಗೆ ನಿನ್ನೆ ಸಂಜೆ ವೇಳೆ ಸಿಡಿಲು ಬಡಿದಿದೆ. ಇದರಿಂದ ಮನೆಗೆ ಭಾಗಶಃ ಹಾನಿಯಾಗಿದೆ. ಇನ್ನು ಇದೇ ವೇಳೆ ಮನೆಯಲ್ಲಿದ್ದ ಜಯಂತಿ ಮಕ್ಕಳ ಮಕ್ಕಳಾದ ಪ್ರಜೀತಾ(19) ರಕ್ಷಿತ (24) ಅವರು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು ಸಂಪೂರ್ಣವಾಗಿ ನಾಶಗೊಂಡಿದೆ. ಮನೆಯ ಗೋಡೆಗಳು ಬಿರುಕುಗೊಂಡಿದೆ. ಹಂಚುಗಳಿಗೆ ಹಾನಿಯಾಗಿವೆ. ಸ್ಥಳಕ್ಕೆ ವೀರಕಂಬ ಗ್ರಾಮ ಕರಣಿಕ ಕರಿಬಸಪ್ಪ ಭೇಟಿ ನೀಡಿ  ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!