Sunday, June 7, 2026
Homeತಾಜಾ ಸುದ್ದಿಕೊರೊನಾ ಲಸಿಕೆ ಪಡೆದ ಅಜ್ಜಿಯ ಬಾಳಲ್ಲಿ ನಡೆಯಿತು ಚಮತ್ಕಾರ: ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿ ವಾಪಾಸ್...

ಕೊರೊನಾ ಲಸಿಕೆ ಪಡೆದ ಅಜ್ಜಿಯ ಬಾಳಲ್ಲಿ ನಡೆಯಿತು ಚಮತ್ಕಾರ: ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿ ವಾಪಾಸ್ ಬಂತು

- Advertisement -
- Advertisement -

ಮುಂಬೈ: ಕೊರೊನಾ ಲಸಿಕೆ ಪಡೆದ ನಂತರ ಅಜ್ಜಿಯೊಬ್ಬರ ಬಾಳಿನಲ್ಲಿ ಬಹುದೊಡ್ಡ ಚಮತ್ಕಾರ ನಡೆದಿದೆ. ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿ ವಾಪಾಸ್ ಬಂದು ಅಚ್ಚರಿ ಮೂಡಿಸಿದೆ.

ಅಂದ್ಹಾಗೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ(70)ಗೆ ಒಂಬತ್ತು ವರ್ಷಗಳ ಹಿಂದೆ ಎರಡೂ ಕಣ್ಣುಗಳ ದೃಷ್ಟಿ ಹೋಗಿತ್ತಂತೆ. ಆಕೆ ಜೂನ್ 26ರಂದು ಹತ್ತಿರದ ಕರೊನಾ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸೇಜ್ ಪಡೆದುಕೊಂಡು ಮನೆಗೆ ಬಂದಿದ್ದಾಳೆ. ಇದಾದ ಮೇಲೆ ಆಕೆಯ ಎರಡೂ ಕಣ್ಣುಗಳು ಶೇ.30-40ರಷ್ಟು ಕಾಣಲಾರಂಭಿಸಿವೆಯಂತೆ.

ಈ ರೀತಿ ಮಹಿಳೆ ಹೇಳಿಕೊಂಡಿದ್ದು, ಪೂರ್ತಿ ದೇಶವೇ ಆಕೆಯನ್ನು ಅಚ್ಚರಿಯಿಂದ ನೋಡುವಂತಾಗಿದೆ. ಆದರೆ ಇದಕ್ಕೆ ವೈಜ್ನಾನಿಕವಾಗಿ ಯಾವುದೇ ಪುರಾವೆಗಳಿಲ್ಲ. ಈ ವಿಚಾರ ಸದ್ಯ ದೇಶದೆಲ್ಲೆಡೆ ಹರಿದಾಡುತ್ತಿದ್ದು, ಇದರ ಬಗ್ಗೆ ಪರಿಣತರು ಪರಿಶೀಲನೆ ನಡೆಸಿದ ನಂತರವೇ ನಿಜಾಂಶ ಹೊರಬರಬೇಕಿದೆ.

- Advertisement -

Latest News

error: Content is protected !!