Thursday, June 4, 2026
Homeತಾಜಾ ಸುದ್ದಿಸಪ್ತಪದಿಯ ಆರನೇ ಹೆಜ್ಜೆ ಇಡುವ ವೇಳೆ ಮದುವೆ ಬೇಡ ಎಂದ ಯುವತಿ

ಸಪ್ತಪದಿಯ ಆರನೇ ಹೆಜ್ಜೆ ಇಡುವ ವೇಳೆ ಮದುವೆ ಬೇಡ ಎಂದ ಯುವತಿ

- Advertisement -
- Advertisement -

ಉತ್ತರಪ್ರದೇಶ:   ಮದುವೆ ಸಮಾರಂಭದ ವೇಳೆ  ಅಗ್ನಿಸಾಕ್ಷಿಯಾಗಿ ಸಪ್ತಪದಿಯ ಆರನೇ ಹೆಜ್ಜೆ ಇಡುವಷ್ಟರಲ್ಲಿ ಕೈಹಿಡಿಯಬೇಕಿದ್ದ ವರನನ್ನೇ ಮದುಮಗಳು ತಿರಸ್ಕರಿಸಿದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ಕಳೆದ ವಾರ ಜರುಗಿದೆ.

ಇಲ್ಲಿನ ಕುಲಾಪಾದ್ ತಾಲ್ಲೂಕಿನ ಬಾಮಹೋ ಗ್ರಾಮದಲ್ಲಿ ಜರುಗಿದ ಈ ಘಟನೆಯಲ್ಲಿ, ವರ ತನಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಅಗ್ನಿಸಾಕ್ಷಿಯ ವೇಳೆಯೇ ಆತನಿಗೆ ಗುಡ್‌ ಬೈ ಹೇಳಿದ್ದಾಳೆ ಮದುಮಗಳು.

ಗಂಡು ಹಾಗು ಹೆಣ್ಣಿನ ಸಂಬಂಧಿಗಳು ಆಕೆಯ ಮನವೊಲಿಸುವ ಎಷ್ಟೇ ಪ್ರಯತ್ನ ಮಾಡಿದರೂ ಆಕೆ ತನ್ನ ನಿರ್ಧಾರ ಬದಲಿಸಲು ಇಚ್ಛಿಸಲಿಲ್ಲ. ಪ್ರಕರಣ ಇನ್ನಷ್ಟು ಗಂಭೀರವಾಗಿ ಪಂಚಾಯಿತಿ ಮಧ್ಯಪ್ರವೇಶದ ಹಂತಕ್ಕೂ ಹೋಗಿತ್ತು. ಆದರೆ ಏನೇ ಆದರೂ ಮದುಮಗಳು ಮಾತ್ರ ತನ್ನ ನಿರ್ಧಾರಕ್ಕೆ ಅಂಟಿಕೊಂಡೇ ಇದ್ದ ಕಾರಣ ಮದುವೆ ರದ್ದಾಗಿದೆ

- Advertisement -

Latest News

error: Content is protected !!