Saturday, May 18, 2024
Homeಕರಾವಳಿಮಾಣಿಯ ದಾಸಗದ್ದೆಯಲ್ಲಿ ಮಹತ್ವದ ಐತಿಹಾಸಿಕ ಶಿಲಾಶಾಸನ ಪತ್ತೆ

ಮಾಣಿಯ ದಾಸಗದ್ದೆಯಲ್ಲಿ ಮಹತ್ವದ ಐತಿಹಾಸಿಕ ಶಿಲಾಶಾಸನ ಪತ್ತೆ

spot_img
- Advertisement -
- Advertisement -

ಬಂಟ್ವಾಳ: ಮಾಣಿಗ್ರಾಮದ ಇತಿಹಾಸದ ಮೇಲೆ  ಬೆಳಕು ಚೆಲ್ಲುವ ಮಹತ್ವದ ಐತಿಹಾಸಿಕ ಶಿಲಾಶಾಸನ  ವೀರಕಂಭ ಸಮೀಪದ  ಶ್ರೀ ಗುಡ್ಡೆ ಚಾಮುಂಡಿ- ಪಂಜುರ್ಲಿ- ಮಲೆಕೊರತಿ ದೈವಗಳ ಚಾವಡಿ ದಾಸಗದ್ದೆಯ ಕಂಬಳದ ಗದ್ದೆಯ ಬದಿಯಲ್ಲಿ ಇರುವಿಕೆಯ ಬಗ್ಗೆ ಮಾಹಿತಿ ಲಭ್ಯ ವಾಗಿದೆ.

ಈ ಶಾಸನದ ಮೇಲ್ಭಾಗದಲ್ಲಿ  ಸೂರ್ಯ ಚಂದ್ರರ ಚಿತ್ರರ ನಡುವಿನಲ್ಲಿ ಶಿವಲಿಂಗದ ಚಿತ್ರವಿದೆ. ಬರಹಗಳು ತುಂಬಾ ಇದ್ದು  ಅಸ್ಪಷ್ಟವಾಗಿದೆ ಮತ್ತು ಅಪೂರ್ವ ಮಾಹಿತಿಯನ್ನು ಒದಗಿಸುವ ಸಾದ್ಯತೆ ಇದೆ. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜ ರ ಕಾಲದಲ್ಲಿ ದಾನ ಭೂಮಿಯನ್ನು ಗುರುತಿಸುವ ಕಲ್ಲೇ ಇದು? ಅಥವಾ ಬಂಗರಸನ ಕಾಲದಲ್ಲಿ ಪ್ರತೀ ಗ್ರಾಮದ ದೇವರು ಮತ್ತು ದೈವಗಳ ವ್ಯಾಪ್ತಿಯಲ್ಲಿ ಬರುವ ಭೂಮಿಯನ್ನು ಗುರುತಿಸಲ್ಪಡುವ ಉದ್ದೇಶ ದಿಂದ ಸ್ಥಾಪಿಸಿದ ಕಲ್ಲು ಇದಾಗಿರಬಹುದೇ ಎಂಬುದು ಸದ್ಯದ ಕುತೂಹಲ.

 ನಾಲ್ಕು ಗುತ್ತು ಮೂರು ಗ್ರಾಮದ, ಅರಸು ದೈವ ಶ್ರೀ ಗುಡ್ಡೆ ಚಾಮುಂಡಿ ದೈವ ಈ ಪರಿಸರದಲ್ಲಿ ಗ್ರಾಮ ದೈವವಾಗಿದ್ದು ಸೀಮೆಯ ಅರಸು ದೈವಗಳಿಂದ  ಅರ್ಧ ಸೀಮೆಯ ಭೂ ಭಾಗದ ಅಧಿಕಾರವನ್ನು ಸೆಳೆದುಕೊಂಡ ದೈವ ಎಂಬ ಹೆಗ್ಗಳಿಕೆ ಇದೆ. ಈ ದೈವದ  ಅಧೀನದಲ್ಲಿ  ಮೂರು ಗ್ರಾಮದಲ್ಲಿ 16ಕ್ಕೂ ಹೆಚ್ಚು ಕಂಬಳ  ಗದ್ದೆಗಳು ಒಳಪಡುತ್ತದೆ. ಈ ದಾಸಗದ್ದೆ ಅಥವಾ ದಾಸಖಂಡ  ಕಂಬಳದ ಗದ್ದೆಯ ಬದಿಯಲ್ಲಿ ದೈವಗಳ ಚಾವಡಿ ಸಮೀಪದಲ್ಲಿ ಈ ಶಿಲಾ ಶಾಸನ ಪತ್ತೆಯಾಗಿರುವುದು ಐತಿಹಾಸಿಕವಾಗಿ  ಒಂದು ಮಹತ್ವದ ಸಂಗತಿಯಾಗಿದೆ.ತ್ರಜ್ಙ ಇತಿಹಾಸಕಾರರು ಇದನ್ನು ಓದುವ ಪ್ರಯತ್ನ ಮಾಡಿದರೆ ಈ ಶಾಸನ ಕಲ್ಲಿನ ರೋಚಕ ಇತಿಹಾಸ ಬೆಳಕಿಗೆ ಬರಬಹುದು ಎಂದು ನಂಬಲಾಗಿದೆ.

- Advertisement -
spot_img

Latest News

error: Content is protected !!