Thursday, May 2, 2024
Homeತಾಜಾ ಸುದ್ದಿಪುತ್ರನ ಮದುವೆಗೆ ಫೇಸ್ ​ಬುಕ್​ ಲೈವ್​ನಲ್ಲೆ ಅಕ್ಷತೆ ಹಾಕಿ ಹರಸಿದ ಪೋಷಕರು

ಪುತ್ರನ ಮದುವೆಗೆ ಫೇಸ್ ​ಬುಕ್​ ಲೈವ್​ನಲ್ಲೆ ಅಕ್ಷತೆ ಹಾಕಿ ಹರಸಿದ ಪೋಷಕರು

spot_img
- Advertisement -
- Advertisement -

ಮುಂಬೈ: ಮಹಾರಾಷ್ಟ್ರ ಥಾಣೆ ಜಿಲ್ಲೆಯ ಕುಟುಂಬವೊಂದು ಸಾವಿರಾರುಗಟ್ಟಲೇ ಕಿಲೋಮೀಟರ್​ ದೂರದಲ್ಲಿ ಕೂತು ತಮ್ಮ ಪುತ್ರನ ಮದುವೆಯನ್ನ ಕಣ್ತುಂಬಿಕೊಂಡಿದೆ..! ದೊಂಬಿವಿಲಿಯಲ್ಲಿ ವಾಸವಿರುವ ಪೋಷಕರು ಕೆನಡಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪುತ್ರ ಭೂಷಣ್​ ಚೌಧರಿ ಹಾಗೂ ಮಂದೀಪ್​ ಕೌರ್​ರ ಮದುವೆಯನ್ನ ಆನ್​ಲೈನ್​​ನಲ್ಲಿ ನೋಡಿ ಖುಷಿಪಟ್ಟಿದೆ.

ದೊಂಬಿವಿಲಿಯಲ್ಲಿ ಪುರೋಹಿತರು ಮಂತ್ರಪಠಿಸುತ್ತಿದ್ದರೆ ಕೆನಡಾದಲ್ಲಿದ್ದ ಜೋಡಿ ಪರಸ್ಪರ ಹಾರ ಬದಲಾಯಿಸಿಕೊಂಡಿದೆ. ಈ ಮದುವೆಯನ್ನ ಫೇಸ್​ಬುಕ್​, ಯುಟ್ಯೂಬ್​​ ನಂತಹ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗಿದೆ.
ಮನೆಯಲ್ಲೇ ಕೂತು ಮದುವೆ ನೋಡುತ್ತಿದ್ದ ಕುಟುಂಬಸ್ಥರು ಸಾಂಕೇತಿಕವಾಗಿ ವಧು-ವರರ ತಲೆಗೆ ಅಕ್ಷತೆ ಕಾಳನ್ನ ಹಾಕಿದ್ರು.

- Advertisement -
spot_img

Latest News

error: Content is protected !!