Wednesday, June 3, 2026
Homeತಾಜಾ ಸುದ್ದಿಸ್ನೇಹಿತರ ಜೊತೆ ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ತಗುಲಿ ಒಬ್ಬ ಸಾವು

ಸ್ನೇಹಿತರ ಜೊತೆ ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ತಗುಲಿ ಒಬ್ಬ ಸಾವು

- Advertisement -
- Advertisement -

ಕೋಲಾರ: ನಾಲ್ವರು ಸ್ನೇಹಿತರು ಬೇಟೆಗೆಂದು ಹೋಗಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಬಳಿ ನಡೆದಿದೆ.  ಗುಂಡು ತಗುಲಿ ಶಂಕರ್ ಎಂಬುವವರು ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ ನಾಲ್ವರು ಸ್ನೇಹಿತರಾದ ಕೋದಂಡಪ್ಪ, ಶ್ರೀನಿವಾಸ, ಚೌಡಪ್ಪ ಮತ್ತು ಶಂಕರ್ ಬೇಟೆಗೆಂದು ತೆರಳಿದ್ದಾಗ ಈ ಘಟನೆ ನಡೆದಿದೆ. ಲೈಸೆನ್ಸ್ ಹೊಂದಿದ್ದ ಕೋದಂಡಪ್ಪ ಗನ್​ನಿಂದ ಮಿಸ್ ಫೈರ್​​ ಆದಾಗ ಗುಂಡು ನೇರವಾಗಿ ಶಂಕರ್ ಹಣೆಗೆ ಬಿದ್ದಿದೆ. ಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

Latest News

error: Content is protected !!