Thursday, June 4, 2026
Homeತಾಜಾ ಸುದ್ದಿಬೇಲ್ ಮೇಲೆ ಹೊರ ಬಂದು ಮತ್ತದೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ

ಬೇಲ್ ಮೇಲೆ ಹೊರ ಬಂದು ಮತ್ತದೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ

- Advertisement -
- Advertisement -

ರಾಜಸ್ಥಾನ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಜೈಲಿನಿಂದ ಹೊರ ಬಂದ ಮೇಲೆ ಮತ್ತೆ ಅದೇ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಘಟನೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

‘ಜೈಪುರದ ಬಾಗ್ರು ಎಂಬಲ್ಲಿರುವ ತನ್ನ ಮನೆಗೆ ಯುವತಿಯನ್ನು ಹೊತ್ತೊಯ್ದ ಆರೋಪಿ ಅಲ್ಲಿ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಪೋಷಕರು ದೂರು ನೀಡಿದ್ದಾರೆ. ಯುವತಿಯನ್ನು ರಕ್ಷಿಸಲಾಗಿದೆ’ ಎಂದು ಕಾರ್ಧನಿ ಪೊಲೀಸ್‌ ಠಾಣೆ ಅಧಿಕಾರಿ ರಾಜೇಶ್ ಬಾಪ್ನಾ ಹೇಳಿದ್ದಾರೆ. ಪ್ರಕರಣ ದಾಖಲಾಗಿರುವುದಾಗಿಯೂ ಅವರು ತಿಳಿಸಿದ್ದಾರೆ.

ಈ ಮೊದಲು ಇದೇ ಆರೋಪಿಯ ವಿರುದ್ಧ ಇದೇ ಯುವತಿ ಅಪಹರಣ ಮತ್ತು ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ, ಚಾರ್ಜ್‌ಶೀಟ್‌ ಅನ್ನೂ ಸಲ್ಲಿಸಿದ್ದರು. ಆರೋಪಿ ಸದ್ಯ ಜಾಮೀನಿನ ಮೇಲೆ ಬಂದಿದ್ದ.

- Advertisement -

Latest News

error: Content is protected !!