Thursday, June 4, 2026
Homeಕರಾವಳಿಚಾಲಕನ ಮೇಲೆ ಟಿಪ್ಪರ್ ಮಗುಚಿ ಬಿದ್ದು, ಸ್ಥಳದಲ್ಲೇ ಸಾವು

ಚಾಲಕನ ಮೇಲೆ ಟಿಪ್ಪರ್ ಮಗುಚಿ ಬಿದ್ದು, ಸ್ಥಳದಲ್ಲೇ ಸಾವು

- Advertisement -
- Advertisement -

ಪಡುಬಿದ್ರಿ: ಚಾಲಕನ ಮೇಲೆ ಟಿಪ್ಪರ್ ಬಿದ್ದು ಸಾವನ್ನಪ್ಪಿದ ಘಟನೆ ನಂದಿಕೂರು ಬಳಿ ಇಂದು ಬೆಳಗ್ಗೆ ನಡೆದಿದೆ. ಹರೀಶ್ ಕೋಟ್ಯಾನ್ (37) ಮೃತ ದುರ್ದೈವಿ.  

ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಸೇರಿದ ಇಂಡಸ್ಟ್ರಿಯಲ್ ಎಸ್ಟೇಟ್ ಸೈಟಲ್ಲಿ ಹರೀಶ್  ಇಂದು ಬೆಳಗ್ಗೆ 10:30 ರ ಸುಮಾರಿಗೆ ಮಣ್ಣು ತುಂಬಿದ್ದ ಟಿಪ್ಪರ್ ನ ಹೈಡ್ರಾಲಿಕ್ ಜಾಕನ್ನು ಏರಿಸಿದಾಗಲೂ ಒದ್ದೆ ಮಣ್ಣು ಬೀಳದೆ ಇದ್ದಾಗ ಟಿಪ್ಪರನ್ನು ಚಾಲೂ ಸ್ಥಿತಿಯಲ್ಲಿರಿಸಿ ಹಿಂಬದಿ ಬೋಲ್ಟ್ ಸರಿಸಲು ಚಾಲಕ ಹರೀಶ್ ಬಂದಾಗ ಟಿಪ್ಪರ್ ಮಗುಚಿ ಅವರ  ಮೇಲೆಯೇ ಬಿದ್ದಿದೆ. ಪರಿಣಾಮ ಹರೀಶ್  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹರೀಶ್ ತಂದೆ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!