Thursday, June 4, 2026
Homeಕರಾವಳಿಮಂಗಳೂರು: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯಿಂದ ಬಡವರಿಗೆ ದಿನಸಿ ಕಿಟ್ ವಿತರಣೆ

ಮಂಗಳೂರು: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯಿಂದ ಬಡವರಿಗೆ ದಿನಸಿ ಕಿಟ್ ವಿತರಣೆ

- Advertisement -
- Advertisement -

ಮಂಗಳೂರು: ಕೊರೋನ ಮಹಾಮಾರಿಯ ಎರಡನೇ ಅಲೆಯ ಹೊಡೆತಕ್ಕೆ ಕಂಗೆಟ್ಟಿರುವ ಈ ಸಮಯದಲ್ಲೂ ಸೌಹಾರ್ದತೆಯೊಂದಿಗೆ ಸೇವಾ ಕಾರ್ಯ ಕೈಗೊಂಡ ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಮಾಸಿಕ ಯೋಜನೆಯಾದ ‘ಬಡವು’ ಯೋಜನೆಯ 14 ಮತ್ತು 15ನೇ ಸೇವಾ ಕಾರ್ಯವು ಜರುಗಿತು.

ಮಂಗಳೂರು ಬಜಾಲ್‌ ಸಮೀಪದ ಗುಡ್ಡೆ ಗುತ್ತು ನಿವಾಸಿ ಕಮಲಾ ಪಂಡಿತ್ ಅವರ ಕುಟುಂಬಕ್ಕೆ ಮತ್ತು ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ವಾಸವಾಗಿರುವ ಆಸೀಫ್ ಎಂಬವರ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರುಗಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯೆ ಶ್ರೀಮತಿ ಶೋಭಾ ಪೂಜಾರಿ, ಸ್ಥಳೀಯರಾದ ಮುಖೇಶ್‌ ಪಂಡಿತ್, ನವಾಝ್, ಸಂಸ್ಥೆಯ ಸಂಸ್ಥಾಪಕರು, ರಾಜ್ಯಾಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕರು ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕರು ರಾಜ್ಯ ಕೋಶಾಧಿಕಾರಿ ಪುಷ್ಪರಾಜ್ ರಾವ್, ಸಂಸ್ಥಾಪಕರು ರಾಜ್ಯ ಜೊತೆ ಕಾರ್ಯದರ್ಶಿ ವಿಕೇಶ್ ಕುಲಾಲ್, ಜೊತೆ ಕಾರ್ಯದರ್ಶಿ ರಿತೇಶ್ ಕುಲಾಲ್, ಸದಸ್ಯರಾದ ರಕ್ಷಿತ್ ಕುಲಾಲ್ ಯೆಯ್ಯಾಡಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!