Thursday, June 4, 2026
Homeಕರಾವಳಿಹಿಂದೂ ದೇವರಿಗೆ ಅವಮಾನ ಪ್ರಕರಣ: ಮಂಗಳೂರಿನಲ್ಲಿ ವ್ಯಕ್ತಿಯ ಬಂಧನ

ಹಿಂದೂ ದೇವರಿಗೆ ಅವಮಾನ ಪ್ರಕರಣ: ಮಂಗಳೂರಿನಲ್ಲಿ ವ್ಯಕ್ತಿಯ ಬಂಧನ

- Advertisement -
- Advertisement -

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟಿನಲ್ಲಿ ಹಿಂದೂ ದೇವರನ್ನು ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ

ಅನ್ಯಕೋಮಿನ ಉದ್ಯಮಿಯೊಬ್ಬರು ಹಿಂದೂ ದೇವರನ್ನು ನಿಂದಿಸಿದ್ದಾರೆ. ಉದ್ಯಮಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು (45) ಸ್ವಾಲಿಝ್ ಇಕ್ಬಾಲ್ ಎಂದು ಗುರುತಿಸಲಾಗಿದೆ.

ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟಕರು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಉಳ್ಳಾಲ ಠಾಣೆಯಲ್ಲೂ ದೂರು ದಾಖಲಾಗಿದ್ದು, ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!