Friday, June 5, 2026
Homeತಾಜಾ ಸುದ್ದಿಲಾಕ್ ಡೌನ್ ಮಧ್ಯೆ ನಡೆಯಿತು ಹೀಗೊಂದು ಸ್ಪೆಷಲ್ ಮ್ಯಾರೇಜ್: ಒಂದೇ ಮುಹೂರ್ತದಲ್ಲಿ ಅಕ್ಕ ತಂಗಿ...

ಲಾಕ್ ಡೌನ್ ಮಧ್ಯೆ ನಡೆಯಿತು ಹೀಗೊಂದು ಸ್ಪೆಷಲ್ ಮ್ಯಾರೇಜ್: ಒಂದೇ ಮುಹೂರ್ತದಲ್ಲಿ ಅಕ್ಕ ತಂಗಿ ಇಬ್ಬರಿಗೆ ತಾಳಿ ಕಟ್ಟಿದ ವರ

- Advertisement -
- Advertisement -

ಕೋಲಾರ : ಲೌಕ್ ಡೌನ್ ಮಧ್ಯೆಯೇ ಯುವಕನೊಬ್ಬ ಅಕ್ಕ ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರಿಸಿದ ಅಚ್ಚರಿಯ ಘಟನೆ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ನಡೆದಿದೆ.

ಸುಪ್ರಿಯಾ ಹಾಗೂ ಲಲಿತಾ ಎಂಬ ಸಹೋದರಿಯರು ಓರ್ವ ಯುವಕನನ್ನು ಮದುವೆಯಾಗಿದ್ದಾರೆ. ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ, ಅಕ್ಕನಿಗೆ ಮದುವೆಯಾಗದೇ ತಂಗಿ ಲಲಿತಾ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದಳು. ನಾನು ಮದುವೆಯಾದರೆ ಅಕ್ಕನಿಗೆ ಎಲ್ಲಿ ಮದುವೆಯಾಗೋದಿಲ್ಲ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುವೆ ಆಗಬೇಕೆಂದರೆ ತನ್ನ ಅಕ್ಕನನ್ನ ಮದುವೆ ಮಾಡಿಕೊಳ್ಳಬೇಕು ಎಂದು ವರ ಉಮಾಪತಿಗೆ ಕಂಡೀಷನ್ ಹಾಕಿದ್ದರು. ಅದಕ್ಕೆ ಒಪ್ಪಿದ ವರ ಮೇ 7 ರಂದು ಗುರು ಹಿರಿಯರ ಸಮ್ಮುಖದಲ್ಲಿ ಅಕ್ಕ ತಂಗಿಯರಿಬ್ಬರನ್ನು ಕೂಡ ಒಂದೇ ಮಹೂರ್ತದಲ್ಲಿ ವರಿಸಿದ್ದಾನೆ.

ಸದ್ಯ, ಈ ಜೋಡಿಗಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮದುವೆ ನೋಡಿದ ಮಂದಿ ಅಚ್ಚರಿ ಪಟ್ಟು ಮಧು ಮಕ್ಕಳಿಗೆ ಶುಭ ಹಾರೈಸಿದ್ದಾರೆ. ವಿಶೇಷ ಅಂದರೆ ಸುಪ್ರಿಯಾ ಲಲಿತಾ ಕುಟುಂಬದಲ್ಲಿ ಈ ತರ ಮದುವೆ ನಡೆದಿದ್ದು, ಇದೇನು ಮೊದಲಲ್ಲ, ರಾಣೆಮ್ಮ ಹಾಗೂ ಸುಬ್ಬಮ್ಮ ಎಂಬುವವರನ್ನು ಇವರ ಸೋದರ ಸಂಬಂಧಿ ನಾಗರಾಜಪ್ಪ ಎಂಬುವವರು ಮದುವೆಯಾಗಿದ್ದರು. ಬಳಿಕ ಸುಪ್ರಿಯಾ ಹಾಗೂ ಲಲಿತಾ ಇದೀಗ ಓರ್ವ ಯುವಕನ ಜೊತೆ ಹಸೆಮಣೆ ಏರಿದ್ದಾರೆ.

- Advertisement -

Latest News

error: Content is protected !!