Thursday, June 4, 2026
Homeಕರಾವಳಿಕಾಸರಗೋಡುಸೌದೆ ಮಧ್ಯೆ ಬಚ್ಚಿಟ್ಟಿದ್ದ 430 ಬಾಟ್ಲಿ ಮದ್ಯ ವಶ

ಸೌದೆ ಮಧ್ಯೆ ಬಚ್ಚಿಟ್ಟಿದ್ದ 430 ಬಾಟ್ಲಿ ಮದ್ಯ ವಶ

- Advertisement -
- Advertisement -

ಕಾಸರಗೋಡು : ಕಾಸರಗೋಡು ಅಬಕಾರಿ ದಳದ ಸಿಬ್ಬಂದಿ ಕಟ್ಟಿಗೆ ರಾಶಿಯಡಿಯಲ್ಲಿ ಬಚ್ಚಿಡಲಾಗಿದ್ದ 430 ಬಾಟ್ಲಿ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ.

ಮಧೂರು ಕಲ್ಲಕಟ್ಟದ ಎ.ಕೆ. ಸಚಿನ್ ಎಂಬಾತನ ಮನೆಯ ಸಮೀಪದ ಕಟ್ಟಿಗೆ ರಾಶಿ ಯೊಂದರಲ್ಲಿ ಮದ್ಯದ ಬಾಟ್ಲಿ ಗಳನ್ನು ಬಚ್ಚಿಡಲಾಗಿತ್ತು. ಖಚಿತ  ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೊಂದು  ಪ್ರಕರಣದಲ್ಲಿ ಕರಂದಕ್ಕಾಡ್ ಸಮೀಪ ಜನವಾಸ ವಿಲ್ಲದ ಮನೆಯ ಹಿಂಬದಿ ಅಕ್ರಮವಾಗಿ ಮಾರಾಟಕ್ಕಿಡಲಾಗಿದ್ದ ಸುಮಾರು 21 ಬಾಟ್ಲಿ ಮದ್ಯವನ್ನು ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ . ಕರ್ನಾಟಕದಿಂದ ಅಕ್ರಮವಾಗಿ ಮದ್ಯ ತರಲಾಗಿತ್ತು ಎನ್ನಲಾಗಿದೆ. ಎರಡೂ ಪ್ರಕರಣಗಳಲ್ಲಿ ಯಾರನ್ನೂ ಬಂಧಿಸಿಲ್ಲ.

- Advertisement -

Latest News

error: Content is protected !!