Thursday, June 4, 2026
Homeತಾಜಾ ಸುದ್ದಿಇಬ್ಬರು ಆಟಗಾರರಿಗೆ ಕೊರೋನಾ: ಇಂದಿನ KKR vs RCB ಪಂದ್ಯ ಮುಂದೂಡಿಕೆ

ಇಬ್ಬರು ಆಟಗಾರರಿಗೆ ಕೊರೋನಾ: ಇಂದಿನ KKR vs RCB ಪಂದ್ಯ ಮುಂದೂಡಿಕೆ

- Advertisement -
- Advertisement -

ನವದೆಹಲಿ: ಕೆಕೆಆರ್ ತಂಡದಲ್ಲಿ ಕೋವಿಡ್ ಸಂಬಂಧಿತ ಕಳವಳದಿಂದಾಗಿ ಇಂದು ನಡೆಯಬೇಕಾಗಿದ್ದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯವನ್ನು ಮುಂದೂಡಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಕೆಆರ್ ತಂಡದ ಆಟಗಾರರಿಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಖ್ಯಾತ ಕ್ರೀಡಾ ವೆಬ್‌ಸೈಟ್‌ ಕ್ರಿಕ್‌ಇನ್ಫೋ ಪ್ರಕಾರ, ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಸ್ಪಿನ್ನರ್ ವರಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಕೋವಿಡ್ 19 ಸೋಂಕು ತಗುಲಿದೆ ಎಂದು ಟ್ವೀಟ್‌ ಮಾಡಲಾಗಿದೆ.

- Advertisement -

Latest News

error: Content is protected !!