Friday, March 29, 2024
Homeಕರಾವಳಿಲಾಕ್ ಡೌನ್ ಇದ್ರೂ ಕೋಳಿ ಅಂಕ: ಪುತ್ತೂರಿನಲ್ಲಿ ಐವರ ಬಂಧನ

ಲಾಕ್ ಡೌನ್ ಇದ್ರೂ ಕೋಳಿ ಅಂಕ: ಪುತ್ತೂರಿನಲ್ಲಿ ಐವರ ಬಂಧನ

spot_img
- Advertisement -
- Advertisement -

ಪುತ್ತೂರು:  ಲಾಕ್ ಡೌನ್ ಜಾರಿಯಲ್ಲಿದ್ದರೂ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ  ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಪುತ್ತೂರಿನ ಬಲ್ನಾಡಿನಲ್ಲಿ ನಡೆದಿದೆ.ಇನ್ನು  ಕೋಳಿಗಳ ಸಹಿತ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಿಷೇಧಾಜ್ಞೆಯ ನಡುವೆ ಬಲ್ನಾಡಿನ ಸರ್ಕಾರಿ ಜಾಗದಲ್ಲಿ ನಿನ್ನೆ ರಾತ್ರಿ ಕೋಳಿ ಅಂಕ ಆಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಬಲ್ನಾಡು ನಿವಾಸಿಗಳಾದ ಲಿಂಗಪ್ಪ ಮೂಲ್ಯ, ಸಂಜೀವ, ನಾರಾಯಣ ನಾಯ್ಕ, ಚಂದ್ರ ಶೇಖರ ಗೌಡ, ಸುಮಂತ್ ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಅಂಕಕ್ಕೆ ಬಳಸಲಾಗುತ್ತಿದ್ದ ಏಳು ಹುಂಜಗಳು ಹಾಗೂ ರೂ. 7,820 ನಗದು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆಗೆ ಇತರ ಆರೋಪಿಗಳು ಪರಾರಿಯಾಗಿದ್ದಾರೆ.

ಗ್ರಾಮಾಂತರ ಎಸ್ಸೈ ಉದಯರವಿ ನೇತೃತ್ವದಲ್ಲಿ ಪ್ರೊಬೇಷನರಿ ಎಸೈ ಶ್ರೀಕಾಂತ್ ರಾಥೋಡ್ ಮತ್ತು ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ.

- Advertisement -
spot_img

Latest News

error: Content is protected !!