Thursday, June 4, 2026
Homeತಾಜಾ ಸುದ್ದಿಕುಟುಂಬ ನಿರ್ವಹಣೆಗೆ ಆರ್ಥಿಕ ತೊಂದರೆ: ಮಕ್ಕಳಿಬ್ಬರಿಗೆ ವಿಷ ನೀಡಿ ತಾಯಿ ಆತ್ಮಹತ್ಯೆ

ಕುಟುಂಬ ನಿರ್ವಹಣೆಗೆ ಆರ್ಥಿಕ ತೊಂದರೆ: ಮಕ್ಕಳಿಬ್ಬರಿಗೆ ವಿಷ ನೀಡಿ ತಾಯಿ ಆತ್ಮಹತ್ಯೆ

- Advertisement -
- Advertisement -

ಹೈದರಾಬಾದ್: ಮನೆಯ ಆರ್ಥಿಕ ಸಮಸ್ಯೆಗಳಿಂದ ಮನನೊಂದ ತಾಯಿಯೊಬ್ಬಳು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಮಹಿಳೆ ಪತಿ ಸುರೇಂದ್ರ ತನ್ನ ಕುಟುಂಬದೊಂದಿಗೆ ಕೊಟ್ಟಗುಟ್ಟು ಕೇಂದ್ರದಲ್ಲಿ ವಾಸವಾಗಿದ್ದರು. ಜೀವನ ನಿರ್ವಹಣೆಗಾಗಿ ಬೆಳಗ್ಗೆ ದಿನಸಿ ವ್ಯವಹಾರ, ರಾತ್ರಿ ಆಟೋ ಓಡಿಸುತ್ತಿದ್ದರು.ಹಾಗಿದ್ದರು ಈ ಕುಟುಂಬಕ್ಕೆ ಹಣದ ಸಮಸ್ಯೆ ಉಂಟಾಗುತ್ತಲೇ ಇತ್ತು. ಹೀಗಾಗಿ  ಆರ್ಥಿಕ ಸಮಸ್ಯೆಗಳಿಂದ ಮನನೊಂದ ಸುರೇಂದ್ರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ಕೆಲಸಕ್ಕೆ ಹೋದ ವೇಳೆ ತಾನು ವಿಷ ಕುಡಿದು, ಮಕ್ಕಳಿಗೂ ಕುಡಿಸಿ ಪ್ರಾಣ ಬಿಟ್ಟಿದ್ದಾರೆ. ಸುರೇಂದ್ರ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಾಗ ಪತ್ನಿ, ಮಕ್ಕಳ ಬಾಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿ ತಕ್ಷಣ ಗುಂಟೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರ್ಥಿಕ ಸಮಸ್ಯೆಗಳಿಂದ ಮನನೊಂದ ಸುರೇಂದ್ರ ಪತ್ನಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದರು. ಗಂಡ ಕೆಲಸಕ್ಕೆ ಹೋದ ವೇಳೆ ತಾನು ವಿಷ ಕುಡಿದು, ಮಕ್ಕಳಿಗೂ ಕುಡಿಸಿ ಪ್ರಾಣ ಬಿಟ್ಟಿದ್ದಾರೆ. ಸುರೇಂದ್ರ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಾಗ ಪತ್ನಿ, ಮಕ್ಕಳ ಬಾಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿ ತಕ್ಷಣ ಗುಂಟೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!