Saturday, June 13, 2026
Homeಕರಾವಳಿಉಡುಪಿಉಡುಪಿಯಲ್ಲಿ ವಾಲಿಬಾಲ್ ಅಂಕಣದಲ್ಲೇ ಹೃದಯಾಘಾತದಿಂದ ಆಟಗಾರ ಸಾವು

ಉಡುಪಿಯಲ್ಲಿ ವಾಲಿಬಾಲ್ ಅಂಕಣದಲ್ಲೇ ಹೃದಯಾಘಾತದಿಂದ ಆಟಗಾರ ಸಾವು

- Advertisement -
- Advertisement -

ಕಾಪು: ವಾಲಿಬಾಲ್ ಅಂಗಳದಲ್ಲೇ ಆಟಗಾರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಇನ್ನಂಜೆಯ ಮೈದಾನದಲ್ಲಿ ನಡೆದಿದೆ . ರಾಜ್ಯಮಟ್ಟದ ಆಟಗಾರ ದೇವು ಅಂಚನ್(35) ಮೃತಪಟ್ಟವರು.

ಕಾಪು ತಾಲ್ಲೂಕಿನ ಇನ್ನಂಜೆಯ ಮೈದಾನದಲ್ಲಿ ನಿನ್ನೆ ರಾತ್ರಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ದೇವು ಅಂಚನ್ ಕೂಡ ಭಾಗವಹಿಸಿದ್ದರು. ವಾಲಿಬಾಲ್ ಪಂದ್ಯಾಟ ಮುಗಿಸಿ ಅಂಗಳದ ಬದಿಯಲ್ಲಿ ವಿಶ್ರಾಂತಿ ಪಡೆಯುವಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲಿ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!