Sunday, May 19, 2024
Homeಕರಾವಳಿಮಹಾಎಕ್ಸ್ ಪ್ರೆಸ್ ವರದಿಯ ಇಂಪ್ಯಾಕ್ಟ್: ಬೆಳ್ತಂಗಡಿ ಬಿಸಿಎಂ ಹಾಸ್ಟೆಲಿಗೆ ಅಧಿಕಾರಿಗಳು ದೌಡು

ಮಹಾಎಕ್ಸ್ ಪ್ರೆಸ್ ವರದಿಯ ಇಂಪ್ಯಾಕ್ಟ್: ಬೆಳ್ತಂಗಡಿ ಬಿಸಿಎಂ ಹಾಸ್ಟೆಲಿಗೆ ಅಧಿಕಾರಿಗಳು ದೌಡು

spot_img
- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ನಗರದ ಹಳೆಕೋಟೆಯಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲಿನಲ್ಲಿ 8 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈ ಬಗ್ಗೆ ನಿಮ್ಮ ಮಹಾ ಎಕ್ಸ್ ಪ್ರೆಸ್ ವರದಿಯನ್ನು ಪ್ರಕಟಿಸಿತ್ತು. ವರದಿ ಪ್ರಕಟಗೊಳ್ಳುತ್ತಿದ್ದಂತೆ  ಹಾಸ್ಟೆಲ್ ಗೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಹಾಸ್ಟೆಲ್ ನ ಎಲ್ಲಾ ವಿದ್ಯಾರ್ಥಿನಿಯರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರು ಕೊರೊನಾ ಪರೀಕ್ಷೆ ನಡೆಸುತ್ತಿದ್ದಾರೆ.

ನಿನ್ನೆ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಮಹಾಎಕ್ಸ್ ಪ್ರೆಸ್  ಹಾಸ್ಟೆಲಿನ ನಾಲ್ಕು ಕೋಣೆಯಲ್ಲಿ 70 ಜನ ವಿದ್ಯಾರ್ಥಿಗಳು ವಾಸ್ತವ್ಯ” ಮಾಡುತ್ತಿದ್ದಾರೆ ಎಂದು ವರದಿ ಮಾಡಿತ್ತು, ಇದರ ಬೆನ್ನಲ್ಲೇ ಅಧಿಕಾರಿಗಳಾದ ಮಂಗಳೂರು ಡಿ.ಎಚ್.ಓ ಬಾಯಾರಿ, ಬೆಳ್ತಂಗಡಿ ಟಿ.ಎಚ್.ಓ ಕಲಾ ಮಧು , ಬೆಳ್ತಂಗಡಿ ತಹಶಿಲ್ದಾರ್ ಮಹೇಶ್.ಜೆ , ನಗರ ಪಂಚಾಯತ್ ಚೀಫ್ ಅಫೀಸರ್ ಸುಧಾಕರ್ ಮತ್ತಿತರ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದು ಬೆಳಿಗ್ಗೆ ಹಾಸ್ಟೆಲ್ ಗೆ ದೌಡಾಯಿಸಿ ಹಾಸ್ಟೆಲ್ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಇನ್ನು ಮಹಾಎಕ್ಸ್ ಪ್ರೆಸ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ವಿವಿಧ ಕಾಲೇಜಿಗೆ ತೆರಳಿ ಕೊರೊನಾ ಪರೀಕ್ಷೆಗೆ ಮುಂದಾಗಿದ್ದು,ಬೆಳ್ತಂಗಡಿ ವಾಣೆ ಕಾಲೇಜ್, ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರೊನಾ ಪರೀಕ್ಷೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರು ನಡೆಸುತ್ತಿದ್ದು ಅದರಲ್ಲಿ ಮೇಲಂತಬೆಟ್ಟು ಕಾಲೇಜಿನ ಓರ್ವ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -
spot_img

Latest News

error: Content is protected !!