Wednesday, June 3, 2026
Homeತಾಜಾ ಸುದ್ದಿಕರಿಮೆಣಸು ಕೊಯ್ಯುವಾಗ ವಿದ್ಯುತ್ ತಂತಿಗೆ ತಗುಲಿದ ಏಣಿ: ವಿದ್ಯುತ್ ಪ್ರವಹಿಸಿ ವ್ಯಕ್ತಿ ಸ್ಥಳದಲ್ಲೇ ಸಾವು

ಕರಿಮೆಣಸು ಕೊಯ್ಯುವಾಗ ವಿದ್ಯುತ್ ತಂತಿಗೆ ತಗುಲಿದ ಏಣಿ: ವಿದ್ಯುತ್ ಪ್ರವಹಿಸಿ ವ್ಯಕ್ತಿ ಸ್ಥಳದಲ್ಲೇ ಸಾವು

- Advertisement -
- Advertisement -

ಮಡಿಕೇರಿ:  ಕರಿಮೆಣಸು ಕೊಯ್ಯುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

ಕೊಡಗಿನ ಆರ್ಜಿ ಗ್ರಾಮದ ನಿವಾಸಿ ಸಬಾಸ್ಟಿನ್ ಲೋಬೋ(60) ಮೃತ ದುರ್ದೈವಿ. ಎಂದಿನಂತೆ ಇಂದು ಬೆಳಗ್ಗೆ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯಕ್ಕೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಸಬಾಸ್ಟಿನ್ ಲೋಬೋ ಕಾಳು ಮೆಣಸು ಕೊಯ್ಯುವ ವೇಳೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ವಿದ್ಯುತ್ ಕಂಬಕ್ಕೆ ಅಲ್ಯೂಮಿನಿಯಂ ಏಣಿ ಇಡುವಾಗ ಅಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದೆ.

ವಿದ್ಯುತ್ ತಂತಿಯಿಂದ ಏಣಿ ಮೂಲಕ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಬಾಸ್ಟಿನ್ ಸಾವನಪ್ಪಿದ್ದಾರೆ. ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!