Tuesday, April 30, 2024
Homeಕ್ರೀಡೆಟಿವಿ ನಿರೂಪಕಿ ಸಂಜನಾ ಗಣೇಶನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ

ಟಿವಿ ನಿರೂಪಕಿ ಸಂಜನಾ ಗಣೇಶನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ

spot_img
- Advertisement -
- Advertisement -

ಪಣಜಿ: ಭಾರತ ತಂಡದ ಖ್ಯಾತ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಹಾಗೂ ಖ್ಯಾತ ಕ್ರೀಡಾ ಟಿವಿ ನಿರೂಪಕಿ ಸಂಜನಾ ಗಣೇಶನ್ ಗೋವಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಜೋಡಿ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕೋವಿಡ್ ಕಾರಣದಿಂದಾಗಿ ಕೆಲವೇ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಮಾತ್ರ ವಿವಾಹಕ್ಕೆ ಆಹ್ವಾನ ನೀಡಲಾಗಿತ್ತು. ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಫೋಟೋಗಳನ್ನು ಐಪಿಎಲ್​ ತಂಡವಾದ ಮುಂಬೈ ಇಂಡಿಯನ್ಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬುಮ್ರಾ ಭಾರತ ತಂಡದಿಂದ ಬಿಡುಗಡೆಯಾದ ದಿನದಿಂದ್ಲು ಅವರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳು ಹರಿದಾಡಿದ್ದವು. ಸಧ್ಯ ಇದಕ್ಕೆ ಬುಮ್ರಾ ಅವ್ರು ಟ್ವಿಟ್ಟರ್‌ʼನಲ್ಲಿ ತಮ್ಮ ಮದುವೆಯ ಪೋಟೋ ಹಂಚಿಕೊಳ್ಳುವ ಮೂಲಕ ಆಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಟ್ವೀಟ್ ಮೂಲಕ ವಿವಾಹದ ಬಗ್ಗೆ ಮಾಹಿತಿ ನೀಡಿದ್ದು, ‘ಪ್ರೀತಿ, ಅದು ನಿಮ್ಮನ್ನು ಯೋಗ್ಯ ಅಂತಾ ಪರಿಗಣಿಸಿದ್ರೆ, ಅದು ನಿಮ್ಮನ್ನ ಮುಂದೆ ಕರೆದೊಯ್ಯುತ್ತೆ. ಪ್ರೀತಿಯ ಮೂಲಕ ಮುಂದೆ ಸಾಗುತ್ತಾ, ನಾವು ಒಟ್ಟಿಗೆ ಹೊಸ ಪ್ರಯಾಣವನ್ನ ಪ್ರಾರಂಭಿಸಿದ್ದೇವೆ. ಇಂದು ನಮ್ಮ ಜೀವನದ ಅತ್ಯಂತ ಸಂತೋಷದಾಯಕ ದಿನಗಳಲ್ಲಿ ಒಂದಾಗಿದೆ ಮತ್ತು ನಮ್ಮ ವಿವಾಹದ ಸುದ್ದಿ ಮತ್ತು ನಮ್ಮ ಸಂತೋಷವನ್ನ ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಖುಷಿಯಾಗ್ತಿದೆ. ಇಂತಿ, ಜಸ್ಪ್ರೀತ್ ಮತ್ತು ಸಂಜನಾ’ ಎಂದು ಬರೆದುಕೊಂಡಿದ್ದಾರೆ.

ಯಾರು ಈ ಸಂಜನಾ ಗಣೇಶನ್​?
28 ವರ್ಷದ ಸಂಜನಾ ಗಣೇಶನ್​ ಮೂಲತಃ ಪುಣೆಯವರು. ಮಾಡೆಲಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಸಂಜನಾ 2014ರಲ್ಲಿ ಫೆಮಿನಾ ಮಿಸ್​ ಇಂಡಿಯಾ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್​ ಕೂಡ ಆಗಿದ್ದಾರೆ. 2016ರಲ್ಲಿ ಸ್ಟಾರ್​ಸ್ಪೋರ್ಟ್ಸ್​ಗೆ ಕ್ರೀಡಾ ನಿರೂಪಕಿಯಾಗಿ ಸೇರ್ಪಡೆಯಾಗಿದ್ದಾರೆ. 2014ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಒಂದರಲ್ಲಿ ಸಂಜನಾ ಭಾಗವಹಿಸಿದ್ದರು. 2016ರ ಈಚೆಗೆ ಕ್ರೀಡೆಗೆ ಸಂಬಂಧಪಟ್ಟ ಶೋ, ಸಂದರ್ಶನಗಳಲ್ಲಿ ಸಂಜನಾ ಸಕ್ರಿಯವಾಗಿದ್ದಾರೆ. ಐಪಿಎಲ್​ ವೇಳೆ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನೈಟ್​ ಕ್ಲಬ್​ ಶೋನ ನಿರೂಪಕಿ ಇವರೇ.

- Advertisement -
spot_img

Latest News

error: Content is protected !!