Thursday, June 4, 2026
Homeಕರಾವಳಿವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನಲ್ಲಿ ವಿದ್ಯುತ್ ಶಾಕ್ ಗೆ ಯುವಕ ಬಲಿ; ದುರಂತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನಲ್ಲಿ ವಿದ್ಯುತ್ ಶಾಕ್ ಗೆ ಯುವಕ ಬಲಿ; ದುರಂತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಮಂಗಳೂರು; ವಿದ್ಯುತ್ ಶಾಕ್ ತಗುಲಿ 21 ವರ್ಷದ ಯುವಕನೊಬ್ಬ  ನಿಂತಲ್ಲೇ ದಾರುಣವಾಗಿ  ಸಾವನ್ನಪ್ಪಿರುವ ಘಟನೆ  ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನಲ್ಲಿ ನಡೆದಿದೆ.

ವೆನ್ಲಾಕ್ ಆಸ್ಪತ್ರೆಯ ಹಿಂಭಾಗದ ಶವಾಗಾರದ ಬಳಿಯಿರುವ ಕ್ಯಾಂಟೀನಲ್ಲಿ ಮೊನ್ನೆ ರಾತ್ರಿ ಘಟನೆ ನಡೆದಿದೆ. ಮೃತ ಬಾಲಕನನ್ನು ಕಂಕನಾಡಿ ನಿವಾಸಿ ಅನೀಶ್ (21) ಎಂದು ಗುರುತಿಸಲಾಗಿದೆ.

ಅನೀಶ್ ಕದ್ರಿ ಕೆಪಿಟಿಯ ಪಾಲಿಟೆಕ್ನಿಕ್ ಓದುತ್ತಿದ್ದು,  ಸಂಜೆಯಿಂದ ರಾತ್ರಿ ವರೆಗೆ ವೆನ್ಲಾಕ್ ಕ್ಯಾಂಟೀನಲ್ಲಿ ಕೆಲಸ ಮಾಡುತ್ತಿದ್ದ. ಮೊನ್ನೆ ರಾತ್ರಿಯೂ ಕೆಲಸ ಮಾಡುತ್ತಿದ್ದ.  ಕೊನೆಗೆ ನೀರು ಹಾಕಿ ನೆಲವನ್ನು ಸ್ವಚ್ಛಗೊಳಿಸುತ್ತಿದ್ದ  ವೇಳೆ, ಶಾಕ್ ತಗುಲಿದೆ. ಕೂಡಲೇ ಯುವಕ ನೆಲಕ್ಕೆ ಬಿದ್ದಿದ್ದಾನೆ. ಇನ್ನು ಈ ದೃಶ್ಯ ಕ್ಯಾಂಟೀನ್ ಸಿಸಿಟಿವಿಯಲ್ಲಿ ದಾಖಲಾಗಿದೆ.

ಇನ್ನು ಅತ್ತಾವರದ ಪ್ರಶಾಂತ್ ಎಂಬವರು ಈ ಕ್ಯಾಂಟೀನ್ ಗುತ್ತಿಗೆ ಪಡೆದು ನಡೆಸುತ್ತಿದ್ದಾರೆ.  ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾಲಕನ ನಿರ್ಲಕ್ಷ್ಯದ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!