Friday, June 5, 2026
Homeಕರಾವಳಿಪಕ್ಕದ ಮನೆಯವನನ್ನು ಮದುವೆಯಾಗೋದಕ್ಕೆ ಒಪ್ಪದ ಹೆತ್ತವರು: ಮನನೊಂದು ಕಡಬದಲ್ಲಿ ಯುವತಿ‌ ಆತ್ಮಹತ್ಯೆ

ಪಕ್ಕದ ಮನೆಯವನನ್ನು ಮದುವೆಯಾಗೋದಕ್ಕೆ ಒಪ್ಪದ ಹೆತ್ತವರು: ಮನನೊಂದು ಕಡಬದಲ್ಲಿ ಯುವತಿ‌ ಆತ್ಮಹತ್ಯೆ

- Advertisement -
- Advertisement -


ಕಡಬ: ಪಕ್ಕದ ಮನೆಯಾತನನ್ನು ಪ್ರೀತಿಸುತ್ತಿದ್ದ ಯುವತಿಯೊಬ್ಬಳು ಆತನನ್ನು ಮದುವೆಯಾಗೋದಕ್ಕೆ ಮನೆಯಲ್ಲಿ ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡಬ ತಾಲೂಕಿನ ಬಲ್ಯ ಗ್ರಾಮದ ಪುತ್ತಿಲ ಬರೆತ್ತಡಿ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.

ಪುತ್ತಿಲ ಬರೆತ್ತಡಿ ನಿವಾಸಿ ಕೊರಗಪ್ಪ ಗೌಡ ಎಂಬವರ ಪುತ್ರಿ ರಮ್ಯ(23) ಆತ್ಮಹತ್ಯೆ ಮಾಡಿಕೊಂಡ ಯುವತಿ.  ಈಕೆ ಪಕ್ಕದ ಮನೆಯ ಮಹೇಶ ಎಂಬಾತನನ್ನು ಪ್ರೀತಿಸುತ್ತಿದ್ದಳು.  ಇದಕ್ಕೆ ಮನೆಯವರ ವಿರೋಧವಿತ್ತು. ಇದರಿಂದ ಬೇಸತ್ತ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮ‌ಹತ್ಯೆ ಮಾಡಿಕೊಂಡಿದ್ದಾಳೆ.

ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ಯುವತಿಯ ತಾಯಿ ಮನೆಗೆ ವಾಪಾಸ್ಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ ರುಕ್ಮ‌ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!