Sunday, May 19, 2024
Homeತಾಜಾ ಸುದ್ದಿಪಂಚರಾಜ್ಯಗಳಲ್ಲಿ ಚುನಾವಣೆ: ಬಿಜೆಪಿ ಪಕ್ಷ ಸೇರಿಕೊಂಡ ಜನಪ್ರಿಯ ನಟಿ ಸ್ರಬಂತಿ

ಪಂಚರಾಜ್ಯಗಳಲ್ಲಿ ಚುನಾವಣೆ: ಬಿಜೆಪಿ ಪಕ್ಷ ಸೇರಿಕೊಂಡ ಜನಪ್ರಿಯ ನಟಿ ಸ್ರಬಂತಿ

spot_img
- Advertisement -
- Advertisement -

ಕೊಲ್ಕತ್ತಾ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯ/ಕೇಂದ್ರಡಾಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ದಿನಾಂಕಗಳ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿರುವ ಬೆನ್ನಲ್ಲೇ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ವೇಗವನ್ನು ಹೆಚ್ಚಿಸಿದೆ.

ಇನ್ನೊಂದೆಡೆ ಬಿಜೆಪಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಗೆಲುವಿನ ಬಾವುಟ ಹಾರಿಸಲು ಮುಂದಾಗಿದೆ. ಈ ಮಧ್ಯೆ ಬೆಂಗಾಳಿ ನಟ, ನಟಿಯರು ಬಿಜೆಪಿ ಬಾಗಿಲು ಬಡಿಯಲು ಮುಂದಾಗಿದ್ದಾರೆ. ಬೆಂಗಾಳಿ ಸಿನಿಮಾಗಳಲ್ಲಿ ನಟಿಸುವ ಜನಪ್ರಿಯ ನಟಿ ಸ್ರಬಂತಿ ಚಟರ್ಜೀ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್​ವರ್ಗಿಯಾ ಮತ್ತು ಪಶ್ಚಿಮ ಬಂಗಾಳ ಬಿಜೆಪಿಯ ರಾಜ್ಯಾಧ್ಯಕ್ಷ ದಿಲಿಪ್ ಘೋಷ್ ಸ್ರಬಂತಿ ಚಟರ್ಜಿಯನ್ನ ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ದಿಲಿಪ್ ಘೋಷ್.. ನಾವು ಸ್ರಬಂತಿ ಚಟರ್ಜಿಯವರನ್ನ ಪಾರ್ಟಿಗೆ ಸ್ವಾಗತಿಸುತ್ತೇವೆ. ಹಲವು ಕ್ಷೇತ್ರಗಳ ಜನರು ಬಿಜೆಪಿ ಪಾರ್ಟಿಗೆ ಸೇರುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

- Advertisement -
spot_img

Latest News

error: Content is protected !!