Friday, June 5, 2026
Homeತಾಜಾ ಸುದ್ದಿಕೇರಳ: RSS ಕಾರ್ಯಕರ್ತನ ಕೊಲೆ ಪ್ರಕರಣ, 6 ಮಂದಿ SDPI ಕಾರ್ಯಕರ್ತರ ಬಂಧನ

ಕೇರಳ: RSS ಕಾರ್ಯಕರ್ತನ ಕೊಲೆ ಪ್ರಕರಣ, 6 ಮಂದಿ SDPI ಕಾರ್ಯಕರ್ತರ ಬಂಧನ

- Advertisement -
- Advertisement -

ಅಲಪ್ಪುಳ: ಕೇರಳದ ಅಲಪ್ಪುಳದಲ್ಲಿ RSS ಮತ್ತು SDPI ಮಧ್ಯೆ ಘರ್ಷಣೆ ಉಂಟಾಗಿದ್ದು ಮಾರಾಮಾರಿಯಲ್ಲಿ ಆರ್.ಎಸ್.ಎಸ್. ಕಾರ್ಯಕರ್ತ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಡಿ.ಪಿ.ಐ.ನ 6 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಅಲಪ್ಪುಳ ಜಿಲ್ಲೆಯ ಚೆರ್ತಾಲಾ ವಯಲಾರ್ ನಲ್ಲಿ ಘಟನೆ ನಡೆದಿದ್ದು, ಆರ್.ಎಸ್.ಎಸ್. ಕಾರ್ಯಕರ್ತ ರಾಹುಲ್ ಕೃಷ್ಣ ಅಲಿಯಾಸ್ ನಂದು ಮೃತಪಟ್ಟಿದ್ದಾರೆನ್ನಲಾಗಿದೆ. ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆ ಖಂಡಿಸಿ ಬಿಜೆಪಿ ಅಲಪ್ಪುಳ ಜಿಲ್ಲೆ ಬಂದ್ ಗೆ ಕರೆ ನೀಡಿದೆ. 12 ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಬಂದ್ ಗೆ ಕರೆ ನೀಡಲಾಗಿದೆ.

ಘಟನೆ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗಲಾಟೆಯ ಪರಿಣಾಮ ಆರ್ ಎಸ್‌ಎಸ್ ಮತ್ತು ಎಸ್ ಡಿಪಿಐ ನ ಕೆಲವು ಕಾರ್ಯಕರ್ತರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

Latest News

error: Content is protected !!