Saturday, June 6, 2026
Homeಕರಾವಳಿಕಡಬದಲ್ಲಿ ಆಪರೇಷನ್ ಚಿರತೆ ಸಕ್ಸಸ್: ಹೇಗಿತ್ತು ನೋಡಿ ಚಿರತೆ ಹಿಡಿಯುವ ಕಾರ್ಯಾಚರಣೆ

ಕಡಬದಲ್ಲಿ ಆಪರೇಷನ್ ಚಿರತೆ ಸಕ್ಸಸ್: ಹೇಗಿತ್ತು ನೋಡಿ ಚಿರತೆ ಹಿಡಿಯುವ ಕಾರ್ಯಾಚರಣೆ

- Advertisement -
- Advertisement -

ಕಡಬ : ಇಲ್ಲಿನ  ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯಲ್ಲಿ ಇಂದು ನಸುಕಿನ ಜಾವ ದಂಪತಿಯ ಮೇಲೆ ದಾಳಿ ನಡೆಸಿ  ಮರವೇರಿ ಕುಳಿತ್ತಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ರೆಂಜಿಲಾಡಿಯ ಹೇರ ನಿವಾಸಿಗಳಾದ ಚಂದ್ರಶೇಖರ್ ಕಾಮತ್ ಹಾಗೂ ಸೌಮ್ಯಾ ಕಾಮತ್ ಎಂಬವರು ಇಂದು ಬೆಳಗಿನ ಜಾವ ತೋಟಕ್ಕೆ ಸ್ಪಿಂಕ್ಲರ್ ಪೈಪ್ ಜೆಟ್ ಬದಲಾಯಿಸಲು ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಚಿರತೆಯಿಂದ ತಪ್ಪಿಸಿಕೊಂಡ ಇಬ್ಬರನ್ನೂ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಪಿಲಿಕುಳ ನಿಸರ್ಗ ಧಾಮದ ನುರಿತ ಶೂಟರ್ ಡಾ.ಯಶಸ್, ಸುಳ್ಯ ಎಸಿಎಫ್ ಆಸ್ಟಿನ್ ಪಿ. ಸೋನ್ಸ್, ಅರಣ್ಯ ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್, ಹಾಗೂ ಸಿಬ್ಬಂದಿ ಚಿರತೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

- Advertisement -

Latest News

error: Content is protected !!