Sunday, August 30, 2026
Homeಕರಾವಳಿಕೇರಳದ ಪಾಲಕ್ಕಾಡ್ ನಲ್ಲೊಬ್ಬಳು ಪಾಪಿ ತಾಯಿ: ಅಲ್ಲಾನನ್ನು ಮೆಚ್ಚಿಸಲು ಹೆತ್ತ ಕಂದಮ್ಮನನ್ನೇ ಕತ್ತು ಸೀಳಿ ಕೊಂದ...

ಕೇರಳದ ಪಾಲಕ್ಕಾಡ್ ನಲ್ಲೊಬ್ಬಳು ಪಾಪಿ ತಾಯಿ: ಅಲ್ಲಾನನ್ನು ಮೆಚ್ಚಿಸಲು ಹೆತ್ತ ಕಂದಮ್ಮನನ್ನೇ ಕತ್ತು ಸೀಳಿ ಕೊಂದ ಅಮ್ಮಾ…

- Advertisement -
- Advertisement -

ಕೇರಳ:  ಪುನರ್ಜನ್ಮ ತಾಳುತ್ತಾರೆ ಅಂತಾ  ಹೈದರಾಬಾದ್‌ನಲ್ಲಿ ವಿದ್ಯಾವಂತ ಪತಿ ತಮ್ಮ ಮಕ್ಕಳನ್ನೇ ಕೊಂದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಕೇರಳ ಪಾಲ್ ಕ್ಕಾಡ್ ನಲ್ಲಿ ನಡೆದಿದೆ.

ಅಲ್ಲಾನನ್ನು ಮೆಚ್ಚಿಸುವುದಕ್ಕಾಗಿ ಗರ್ಭಿಣಿ ಶಿಕ್ಷಕಿಯೊಬ್ಬರು ತಮ್ಮ ಆರು ವರ್ಷದ ಮಗುವನ್ನು ಕೊಲೆ ಮಾಡಿದ್ದಾಳೆ.  30 ವರ್ಷದ ಮದರಸಾ ಶಿಕ್ಷಕಿ ಶಾಹಿದಾ ಇಂತಹ ಅಮಾನುಷ ಕೃತ್ಯ ಎಸಗಿದ್ದಾಳೆ.  ತನ್ನ ಮಗನನ್ನು ಅಲ್ಲಾನಿಗೆ ಅರ್ಪಿಸಿದ್ದೇನೆ ಎಂದು ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಮಹಿಳೆ ಹೇಳಿದ್ದಾಳೆ.

ಆಕೆಯ ಪತಿ ಗಲ್ಫ್ ನಿಂದ  ಹಿಂದಿರುಗಿದ ಹಿಂತಿರುಗಿದ್ದರು. ಅವರು ತನ್ನ ಇನ್ನಿಬ್ಬರು ಗಂಡು ಮಕ್ಕಳೊಂದಿಗೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ. ಮಹಿಳೆಗೆ ಮೂವರು ಗಂಡು ಮಕ್ಕಳಿದ್ದು, ಪುನಃ ಗರ್ಭಿಣಿಯಾಗಿದ್ದಾಳೆ. ತನ್ನ ಕೊನೆಯ ಮಗುವನ್ನು ಈಕೆ ಕೊಲೆ ಮಾಡಿದ್ದಾಳೆ. ನಸುಕಿನಲ್ಲಿ ಮಗುವನ್ನು ಬಾತ್‌ರೂಂಗೆ ಕರೆದುಕೊಂಡು ಹೋಗಿ ಕೈಕಾಲುಗಳನ್ನು ಕಟ್ಟಿ ನಂತರ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.

ಕೊಲೆ ಮಾಡಿದ ಬಳಿಕ ಪಾಲಕ್ಕಾಡ್ ಎಮೆರ್ಜೆನ್ಸಿ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ, ತಾನು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಮುಂಜಾನೆ 3ರಿಂದ 4 ಗಂಟೆ ಸಮಯದಲ್ಲಿ. ಈ ವಿಷಯ ಪಕ್ಕದ ಕೋಣೆಯಲ್ಲೇ ಮಲಗಿದ್ದ ಗಂಡ ಮತ್ತು ಇನ್ನಿಬ್ಬರು ಮಕ್ಕಳಿಗೆ ತಿಳಿದಿರಲಿಲ್ಲ.

ಪೊಲೀಸರು ಬರುವ ವೇಳೆ ಮಗುವಿನ ಮೃತದೇಹವು ಸ್ನಾನದ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೊಲೆ ಆರೋಪಿತೆ ಶಾಹಿದಾ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಕೆ ಅಲ್ಲಾನಿಗೆ ತ್ಯಾಗ ಮಾಡಲು ಈ ಕೊಲೆ ಮಾಡಿದ್ದಾಳೋ ಅಥವಾ ಬೇರೆ ಕಾರಣಕ್ಕೋ ಎಂಬುದನ್ನು ತನಿಖೆ ನಡೆಸಿದ ನಂತರವೇ ನಿರ್ಧರಿಸಲಾಗುತ್ತದೆ ಎಂದು ಎಸ್​​ಪಿ ಆರ್​. ವಿಶ್ವನಾಥ್ ತಿಳಿಸಿದ್ದಾರೆ.

- Advertisement -

Latest News

error: Content is protected !!