Thursday, June 4, 2026
Homeತಾಜಾ ಸುದ್ದಿಮಗಳ ಮದುವೆಗೆ ಸಿಎಂರನ್ನು ಆಹ್ವಾನಿಸಿದ ಡಿ ಕೆ ಶಿವಕುಮಾರ್: ಹೇಗಿದೆ ಗೊತ್ತಾ ಆಮಂತ್ರಣ ಪತ್ರಿಕೆ?

ಮಗಳ ಮದುವೆಗೆ ಸಿಎಂರನ್ನು ಆಹ್ವಾನಿಸಿದ ಡಿ ಕೆ ಶಿವಕುಮಾರ್: ಹೇಗಿದೆ ಗೊತ್ತಾ ಆಮಂತ್ರಣ ಪತ್ರಿಕೆ?

- Advertisement -
- Advertisement -

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ ಇಂದು ಭೇಟಿಯಾಗಿದ್ದಾರೆ.

ಪ್ರತಿನಿತ್ಯ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರೋ ದಿನಗಳಲ್ಲಿ ಡಿ ಕೆ ಶಿವಕುಮಾರ್ ಅವರ ದಿಢೀರ್ ಭೇಟಿ ನಿಜಕ್ಕೂ ಕುತೂಹಲ ಮೂಡಿಸಿತ್ತು. ಈ ಹಠಾತ್ ಭೇಟಿಯ ಕಾರಣವೇನು ಎಂದ ಕುತೂಹಲ ಎಲ್ಲರಲ್ಲೂ ಇದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಪುತ್ರ ಅಮಾರ್ಥ್ಯ ಹೆಗ್ಡೆ ಅವರ ವಿವಾಹ ನಿಶ್ಚಿತಾರ್ಥ ನವೆಂಬರ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು.

ಮಗಳ ಮದುವೆಗೆ ಸಿಎಂ ಬಿಎಸ್.ಯಡಿಯೂರಪ್ಪ ಅವರಿಗೆ ಡಿಕೆಶಿ ಆಹ್ವಾನ ನೀಡಿದ್ದಾರೆ. ಪ್ರೇಮಿಗಳ ದಿನವಾದ ಫೆ.14, 15 ರಂದು ಡಿಕೆಶಿ ಪುತ್ರಿ ಐಶ್ವರ್ಯಾ ವಿವಾಹ ಅದ್ಧೂರಿಯಾಗಿ ನಡೆಯಲಿದೆ.

- Advertisement -

Latest News

error: Content is protected !!