Friday, June 27, 2025
Homeತಾಜಾ ಸುದ್ದಿಜ್ಯೋತಿಷಿ ಆನಂದ್ ಗುರೂಜಿಯ ಖಾಸಗಿ ವಿಡಿಯೋ ವೈರಲ್ ಮಾಡೋ ಬೆದರಿಕೆ, ಸ್ನೇಹಿತರಿಂದಲೇ 50 ಲಕ್ಷ ರೂ.ಗೆ...

ಜ್ಯೋತಿಷಿ ಆನಂದ್ ಗುರೂಜಿಯ ಖಾಸಗಿ ವಿಡಿಯೋ ವೈರಲ್ ಮಾಡೋ ಬೆದರಿಕೆ, ಸ್ನೇಹಿತರಿಂದಲೇ 50 ಲಕ್ಷ ರೂ.ಗೆ ಡಿಮ್ಯಾಂಡ್

spot_img
- Advertisement -
- Advertisement -

ಬೆಂಗಳೂರು: ಖ್ಯಾತ ಜ್ಯೋತಿಷಿ ಆನಂದ್​ ಗುರೂಜಿ ಅವರಿಗೆ ಸಂಬಂಧಿಸಿದ ಖಾಸಗಿ ವಿಡಿಯೋವೊಂದನ್ನು ಇಟ್ಟುಕೊಂಡು 50 ಲಕ್ಷ ರೂ ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡಿದ ಆರೋಪ ಕೇಳಿ ಬಂದಿದ್ದು, ಬ್ಲ್ಯಾಕ್‌ಮೇಲ್ ಮಾಡಿದ್ದ ಜ್ಯೋತಿಷಿಯ ಮೂವರು ಸ್ನೇಹಿತರ ವಿರುದ್ಧ ಗಿರಿನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನಂದ್​ ಗುರೂಜಿ ಮತ್ತು ಎಸ್.​ಇ. ಸುದೀಂದ್ರ ಅವರ ಕುರಿತಾಗಿ ಕೆಟ್ಟದ್ದಾಗಿ ಚಿತ್ರಿಸಿದ ವಿಡಿಯೋ ತುಣಕನ್ನು ವೈರಲ್​ ಮಾಡುವುದಾಗಿ ಬೆದರಿಸಿದ ದುಷ್ಕಮಿಗಳು ಹಣಕ್ಕಾಗಿ ಸುಧೀಂದ್ರನನ್ನು ಪೀಡಿಸಿದ್ದಾರೆ. ಈ ಬಗ್ಗೆ ಸುದೀಂದ್ರರ ಆಪ್ತ ಬಿ.ಆರ್​.ನಾಗರಾಜ್​​ ದೂರು ನೀಡಿದ್ದಾರೆ. ನಾಗರಾಜ್​ ಕೊಟ್ಟ ದೂರಿನ ಮೇರೆಗೆ ಕೃಷ್ಣಮೂರ್ತಿ, ವೆಂಕಟೇಶ್ ಮತ್ತು ಜಿ.ಕೆ. ವೇಲು ಅಲಿಯಾಸ್​ ಮಾರ್ಕೆಟ್​ ವೇಲು ಎಂಬುವವರ ವಿರುದ್ಧ ಕೇಸ್​ ದಾಖಲಾಗಿದೆ.

50 ಲಕ್ಷಕ್ಕೆ ಡಿಮ್ಯಾಂಡ್
ಹಾಯ್​ ಸೂರ್ಯ ಪತ್ರಿಕೆ ಪ್ರದಾನ ಸಂಪಾದನ ಜಿ.ಕೆ. ವೇಲು ಅಲಿಯಾಸ್​ ಮಾರ್ಕೆಟ್​ ವೇಲು ಮತ್ತು ಯುವ ಕರ್ನಾಟಕ ಸಂಘದ ಅಧ್ಯಕ್ಷ ಎ.ಸಿ.ವೆಂಕಟೇಶ್​ ಎಂಬುವವರು ಸುಧೀಂದ್ರ ಹಾಗೂ ಆನಂದ್​ಗುರೂಜಿ ಕುಟುಂಬದ ವೈಯಕ್ತಿಕ ವಿಷಯಗಳ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ಸಿದ್ಧಪಡಿಸಿದ್ದು, ಅದರ ಕುರಿತು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಹಾಗೂ ಎಲ್ಲ ಟಿವಿ ಚಾನೆಲ್​ಗಳಿಗೂ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಈ ಬಗ್ಗೆ ಸುದ್ದಿ ಮಾಡದಿರಲು 50 ಲಕ್ಷ ರೂ. ಕೊಡುವಂತೆ ಸುಧೀಂದ್ರಗೆ ಬ್ಲಾಕ್ ಮೇಲ್ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜನವರಿ 28ರಂದು ಗುರೂಜಿ ಆಪ್ತ ನಾಗರಾಜ್ ಬಿ.ಆರ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ವಿರುದ್ಧ ದೂರು ನೀಡಿದ್ದರಿಂದ ಸಿಟ್ಟಿಗೆದ್ದ ಆರೋಪಿಗಳು ವಾಟ್ಸ್ ಗ್ರೂಪ್​ನಲ್ಲಿ ಗುರೂಜಿ ಹಾಗೂ ಸುಧೀಂದ್ರ ಕುರಿತು ಮಾನಹಾನಿ ಸಂದೇಶ ರವಾನಿಸಿ ಈಗಲಾದ್ರೂ ಕನಿಷ್ಠ 26ಲಕ್ಷ ಹಣ ಕೊಡಿ, ಇಲ್ಲವಾದ್ರೆ ಬೇರೆ ವೈಯಕ್ತಿಕ ವಿಷಯಗಳನ್ನ ಹಂತ ಹಂತವಾಗಿ ವೈರಲ್ ಮಾಡುವುದಾಗಿ ಹೇಳಿದ್ದರೂ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ದೂರು ದಾಖಲಾದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈಗ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

- Advertisement -
spot_img

Latest News

error: Content is protected !!