Thursday, June 4, 2026
Homeತಾಜಾ ಸುದ್ದಿKPSCಯಿಂದ ಮುಂದೂಡಲ್ಪಟ್ಟಿದ್ದ 'FDA ಪರೀಕ್ಷಾ' ದಿನಾಂಕ ಮರುನಿಗದಿ

KPSCಯಿಂದ ಮುಂದೂಡಲ್ಪಟ್ಟಿದ್ದ ‘FDA ಪರೀಕ್ಷಾ’ ದಿನಾಂಕ ಮರುನಿಗದಿ

- Advertisement -
- Advertisement -

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಜನವರಿ 24 ರಂದು ರದ್ದಾಗಿದ್ದ ಎಫ್​ಡಿಎ ಪರೀಕ್ಷೆಗೆ ಕರ್ನಾಟಕ ಲೋಕಸವಾ ಆಯೋಗ ಮರು ದಿನಾಂಕವನ್ನ ಪ್ರಕಟಿಸಿದೆ.

ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು. ಫೆಬ್ರವರಿ 28ರಂದು ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಎಫ್​ಡಿಎ ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಜನವರಿ 24ರಂದು ನಡೆಬೇಕಿದ್ದ ಪರೀಕ್ಷೆಯನ್ನ ರದ್ದು ಮಾಡಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಆರು ಮಂದಿ ಆರೋಪಿಗಳನ್ನ ಸಿಸಿಬಿ ವಶಕ್ಕೆ ಪಡೆದಿದೆ.

ರಾಚಪ್ಪ, ಚಂದ್ರು ಸೇರಿದಂತೆ ಬಂಧಿತರಿಂದ 24 ಲಕ್ಷ ರೂಪಾಯಿ ನಗದು ಹಾಗೂ ಮೂರು ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಪರೀಕ್ಷೆಯ ಮರು ದಿನಾಂಕ ಪ್ರಕಟವಾಗಿದೆ.

- Advertisement -

Latest News

error: Content is protected !!