Wednesday, June 3, 2026
Homeಕರಾವಳಿಬಸ್ ನಲ್ಲಿ ತನಗೆ ಕಿರುಕುಳ ನೀಡಿದ ವ್ಯಕ್ತಿಯ ಕೆನ್ನೆಗೆ ಪೊಲೀಸರೆದುರೇ ಬಾರಿಸಿದ ಯುವತಿ: ವೈರಲ್...

ಬಸ್ ನಲ್ಲಿ ತನಗೆ ಕಿರುಕುಳ ನೀಡಿದ ವ್ಯಕ್ತಿಯ ಕೆನ್ನೆಗೆ ಪೊಲೀಸರೆದುರೇ ಬಾರಿಸಿದ ಯುವತಿ: ವೈರಲ್ ಆಯ್ತು ವಿಡಿಯೋ

- Advertisement -
- Advertisement -

ಮಂಗಳೂರು: ನಗರದ ಕೆ.ಎಸ್‌.ಹೆಗ್ಡೆ ಕಾಲೇಜಿನಿಂದ ಖಾಸಗಿ ಬಸ್‌ನಲ್ಲಿ ಪಂಪ್‌ವೆಲ್‌ಗೆ ಹೋಗುತ್ತಿದ್ದಾಗ ಬಸ್ ನಲ್ಲಿ ಪಕ್ಕದಲ್ಲಿ ಕುಳಿತಿದ್ದ ಮಧ್ಯವಯಸ್ಸಿನ ವ್ಯಕ್ತಿಯೋರ್ವ ಕಿರುಕುಳ ನೀಡಿದ ಬಗ್ಗೆ ಯುವತಿಯೊಬ್ಬರು ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದು ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಕಮಿಷನರ್ ಇಂದು ಸುದ್ದಿಗೋಷ್ಟಿ ಕರೆದಿದ್ದರು. ಈ ವೇಳೆ ಆರೋಪಿಯನ್ನೂ ಮಾಧ್ಯಮದವರ ಮುಂದೆ ಕರೆತಂದಿದ್ದಾರೆ. ಅಲ್ಲಿಯೇ ಇದ್ದ ಯುವತಿ ಆರೋಪಿಯನ್ನು ಕಂಡೊಡನೆ ಪೊಲೀಸರ ಎದುರೇ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

- Advertisement -

Latest News

error: Content is protected !!