Friday, June 5, 2026
Homeಕರಾವಳಿಸಚಿವನಾಗುವ ಸಂಭ್ರಮದಲ್ಲಿದ್ದಾರೆ ಎಸ್ ಅಂಗಾರ: ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ವಿಶೇಷ ಪೂಜೆ, ನಳೀನ್ ಕುಮಾರ್ ಕಟೀಲ್...

ಸಚಿವನಾಗುವ ಸಂಭ್ರಮದಲ್ಲಿದ್ದಾರೆ ಎಸ್ ಅಂಗಾರ: ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ವಿಶೇಷ ಪೂಜೆ, ನಳೀನ್ ಕುಮಾರ್ ಕಟೀಲ್ ಭೇಟಿ

- Advertisement -
- Advertisement -

ಬೆಂಗಳೂರು: ಸುಳ್ಯದ ಶಾಸಕರೊಬ್ಬರು ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ಹಾಗಾಗಿ ಸುಳ್ಯದೆಲ್ಲೆಡೆ ಸಂಭ್ರಮ  ಮನೆ ಮಾಡಿದೆ. ಮತ್ತೊಂದು ಕಡೆ ಇಂದು ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯೋದಕ್ಕೆ ನಿನ್ನೆಯೇ ಯಡಿಯೂರಪ್ಪ ಅವರಿಂದ ಬುಲಾವ್ ಬಂದ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಇನ್ನು ಇಂದು ಬೆಳಗ್ಗೆ ಎಸ್ ಅಂಗಾರ ಅವರು ಬೆಂಗಳೂರಿನ ಬನಶಂಕರಿ ದೇಗುಲಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ರೆ. ಇತ್ತ ಸುಳ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತರಲ್ಲೂ ಭಾರೀ ಸಂಭ್ರಮ ಮನೆ ಮಾಡಿದೆ.

- Advertisement -

Latest News

error: Content is protected !!