- Advertisement -
- Advertisement -
ತಿರುಪತಿ:ಕಲ್ಯಾಣಿ ಅಣೆಕಟ್ಟು ಬಳಿ ಇರುವ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಡೆದ ಘಟನೆಯೊಂದು ನೋಡುಗರ ಕಣ್ತುಂಬಿ ಬರುವಂತಿದೆ. ಪೊಲೀಸ್ ಇಲಾಖೆಯಲ್ಲಿ ತನಗಿಂತ ಮೇಲಿನ ಸ್ಥಾನಕ್ಕೆ ನೇಮಕವಾಗಿರುವ ಮಗಳಿಗೆ ತಂದೆ ಸೆಲ್ಯೂಟ್ ಮಾಡಿದ್ದು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಯೆಂಡಲೂರು ಶ್ಯಾಮ್ ಸುಂದರ್ ತಿರುಪತಿಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮಗಳು ಮಗಳು ವೈ ಜೆಸ್ಸಿ ಪ್ರಶಾಂತಿ ಇವರೈಗಿಂತ ಮೇಲಿನ ಸ್ಥರದ ಉದ್ಯೋಗಿ ಯಾಗಿದುವು ಪೊಲೀಸ್ ಡ್ಯೂಟಿ ಮೀಟ್ನಲ್ಲಿ ಭಾಗಿಯಾಗಿದ್ದರು.ಈವೇಳೆ ತನ್ನ ಬಳಿ ಮಾತನಾಡಲು ಬಂದ ತನಗಿಂತ ಮೇಲಿನ ಸ್ಥಾನದಲ್ಲಿರುವ ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡಿದ್ದಾರೆ. ಆದರೆ ಪ್ರಶಾಂತಿ ತಂದೆಯನ್ನ ಗೌರವಿಸಿ ಮಾತುಕತೆ ನಡೆಸಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
- Advertisement -