Wednesday, June 3, 2026
Homeತಾಜಾ ಸುದ್ದಿಆರೋಗ್ಯ ಸಮಸ್ಯೆಯಿಂದಾಗಿ ನಾನು ರಾಜಕೀಯಕ್ಕೆ ಬರಲ್ಲ: ಟ್ವೀಟ್ ಮೂಲಕ ನಟ ರಜಿನಿಕಾಂತ್ ಸ್ಪಷ್ಟನೆ

ಆರೋಗ್ಯ ಸಮಸ್ಯೆಯಿಂದಾಗಿ ನಾನು ರಾಜಕೀಯಕ್ಕೆ ಬರಲ್ಲ: ಟ್ವೀಟ್ ಮೂಲಕ ನಟ ರಜಿನಿಕಾಂತ್ ಸ್ಪಷ್ಟನೆ

- Advertisement -
- Advertisement -

ಚೆನ್ನೈ: ಇದೇ ತಿಂಗಳ ಕೊನೆಯಲ್ಲಿ ತಮ್ಮ ರಾಜಕೀಯ ಪಕ್ಷದ ಬಗ್ಗೆ ಘೋಷಣೆ ಮಾಡೋದಾಗಿ ಈ ಹಿಂದೆ ಸೂಪರ್ ಸ್ಟಾರ್ ರಜಿನಿಕಾಂತ್ ಹೇಳಿದ್ದರು. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇದೀಗ ರಜಿನಾಕಂತ್ ಅವರು ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನು ಹೇಳಿದ್ದಾರೆ.

ಹೌದು.. ಶೀಘ್ರದಲ್ಲೇ ರಜಿನಿಕಾಂತ್ ರಾಜಕೀಯಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡ್ತಾರೆ ಅಂತಾ ರಜಿನಿ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೀಗ ರಜಿನಿಕಾಂತ್ ನಾನು ರಾಜಕೀಯಕ್ಕೆ ಬರಲ್ಲ ಅಂತಾ ಅವ್ರು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಾನು ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ರಾಜಕೀಯಕ್ಕೆ ಬರಲ್ಲ ಎಂದಿದ್ದಾರೆ. ಅಲ್ಲದೇ ತಮಿಳಿನಲ್ಲಿ ಈ ಬಗ್ಗೆ ಸುದೀರ್ಘವಾದ ಪತ್ರವೊಂದನ್ನು ಕೂಡ ರಜಿನಿಕಾಂತ್ ಬರೆದಿದ್ದಾರೆ.

 ರಜಿನಿಕಾಂತ್ ಅವರ ರಾಜಕೀಯ ಎಂಟ್ರಿ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದ ಅವರ ಅಭಿನಮಾನಿಗಳಿಗೆ ರಜಿನಿಕಾಂತ್ ಅವರ ನಿರ್ಧಾರ ಬೇಸರ ಮೂಡಿಸಿದೆ.

- Advertisement -

Latest News

error: Content is protected !!