Thursday, June 4, 2026
Homeತಾಜಾ ಸುದ್ದಿದೇಶ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳು-ದೇಶದ್ರೋಹದ ಪ್ರಕರಣದಲ್ಲಿ ಅಂದರ್!..

ದೇಶ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳು-ದೇಶದ್ರೋಹದ ಪ್ರಕರಣದಲ್ಲಿ ಅಂದರ್!..

- Advertisement -
- Advertisement -

ಅಯೋಧ್ಯೆ:ಇಲ್ಲಿನ ಸಾಕೇತ್‌ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಚುನಾವಣೆ ನಡೆಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಡಿಸೆಂಬರ್‌ 16 ರಂದು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.ಈ ವೇಳೆ ದೇಶ ವಿರೋಧಿ ಘೋಷಣೆಗಳನ್ನು ಹಾಕಿದ ಆರೋಪದ ಮೇರೆಗೆ ಇಲ್ಲಿನ ಕಾಲೇಜೊಂದರ ಆರು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಕಾಲೇಜಿನ ಪ್ರಾಂಶುಪಾಲ ಎನ್‌.ಡಿ ಪಾಂಡೆ ಅವರು ದೂರು ನೀಡಿದ್ದು ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ‘ಆಜಾದಿ ಲೇಕೆ ರಹೇಂಗೆ’ ( ಸ್ವಾತಂತ್ರ್ಯ ಪಡೆದೆ ತೀರುತ್ತೇವೆ) ಎನ್ನುವ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ವಿದ್ಯಾರ್ಥಿಗಳು,ನಾವು ಭ್ರಷ್ಟ ಪ್ರಾಂಶುಪಾಲ ಮತ್ತು ವಿದ್ಯಾರ್ಥಿ ವಿರೋಧಿ ವ್ಯವಸ್ಥೆಯಿಂದ ಸ್ವಾತಂತ್ರ್ಯ ಬಯಸಿದ್ದೇವೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!