Thursday, June 4, 2026
Homeಕರಾವಳಿಉಜಿರೆ ಬಾಲಕನ ಕಿಡ್ನಾಪ್ ಪ್ರಕರಣ: ಅಪಹರಣಕಾರರಿಂದ 17 ಕೋಟಿಗೆ ಬೇಡಿಕೆ !

ಉಜಿರೆ ಬಾಲಕನ ಕಿಡ್ನಾಪ್ ಪ್ರಕರಣ: ಅಪಹರಣಕಾರರಿಂದ 17 ಕೋಟಿಗೆ ಬೇಡಿಕೆ !

- Advertisement -
- Advertisement -

ಉಜಿರೆ: ಇಲ್ಲಿಯ ಬಿಜೋಯ್ ಏಜೆನ್ಸಿಸ್ ಮಾಲೀಕ, ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ನನ್ನು ನಿನ್ನೆ ಸಂಜೆ ಉಜಿರೆಯ ರಥಬೀದಿಯ ಬಳಿ ಆಟವಾಡುತ್ತಿದ್ದ ಸಮಯದಲ್ಲಿ ಬಿಳಿ ಇಂಡಿಕಾ ಕಾರಿನಲ್ಲಿ ಮನೆಯ ಗೇಟ್ ಬಳಿಯಿಂದ ಅಪಹರಿಸಲಾಗಿದೆ.

ಇದೀಗ ಅಪಹರಣಕಾರರು 17 ಕೋಟಿ‌ ರೂ. ನೀಡುವಂತೆ ಬೇಡಿಕೆಯನ್ನು ಇರಿಸಿದ್ದಾರೆ ಎಂದು ಬಾಲಕನ ಅಜ್ಜ ಎಕೆ ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಕೆ ಶಿವನ್ ಅವರು ವಾಕಿಂಗ್ ಹೋಗಿದ್ದಾಗ ಮೊಮ್ಮಗ ಆಟವಾಡಿ ಅಜ್ಜನ ಎದುರಿನಿಂದ ಮನೆ ಕಡೆಗೆ ಹೋಗುತ್ತಿದ್ದ. ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಅಲ್ಲಿಯೆ ನಿಂತಿದ್ದ ಬಿಳಿ ಬಣ್ಣದ ಇಂಡಿಕಾ ಕಾರಿನಿಂದ ಇಬ್ಬರು ಅಪರಿಚಿತರು ಇಳಿದು ಬಾಲಕನನ್ನು ಬಲವಂತದಿಂದ ಕಾರಿಗೆ ಹತ್ತಿಸಿಕೊಂಡಿದ್ದಾರೆ.

ಶಿವನ್ ಓಡಿ ಬಂದು ‌ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸುವ ವೇಳೆಗೆ ಕಾರನ್ನು ಚಲಾಯಿಸಿಕೊಂಡು ರಥ ಬೀದಿ ಕಡೆಗೆ ತೆರಳಿದ್ದಾರೆ. ಬಳಿಕ ಶಿವನ್ ಅವರ ಸೊಸೆಗೆ ಅಪಹರಣಕಾರರು ಪೋನ್ ಮಾಡಿ ಮಗನನ್ನು ಬಿಡಿಸಲು 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ಬೇಡಿಕೆ ಇಟ್ಟಿರುವುದಾಗಿ ಶಿವನ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಠಾಣೆಗೆ ಬಾಲಕನ ಅಜ್ಜ ಎ ಕೆ ಶಿವನ್ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!