Wednesday, June 3, 2026
Homeತಾಜಾ ಸುದ್ದಿಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ತಾರಾ ಹಳ್ಳಿ ಹಕ್ಕಿ? ದೊಡ್ಮನೆಗೆ ಎಂಟ್ರಿ ಕೊಡ್ತಾರಾ ಹೆಚ್ ವಿಶ್ವನಾಥ್?

ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ತಾರಾ ಹಳ್ಳಿ ಹಕ್ಕಿ? ದೊಡ್ಮನೆಗೆ ಎಂಟ್ರಿ ಕೊಡ್ತಾರಾ ಹೆಚ್ ವಿಶ್ವನಾಥ್?

- Advertisement -
- Advertisement -

ಬೆಂಗಳೂರು: ಬಿಗ್ ಬಾಸ್ ಸೀಸನ್ 8 ಗೆ ತಯಾರಿ ಜೋರಾಗಿ ನಡೆಯುತ್ತಿದೆ. ಹೀಗಿರುವಾಗಲೇ ಈ ಬಾರಿ ಬಿಗ್ ಬಾಸ್ ಸೀಸನ್ 8 ನಲ್ಲಿ ಅವರು ಕಾಣಿಸಿಕೊಳ್ತಾರೆ ಇವರು ಕಾಣಿಸಿಕೊಳ್ತಾರೆ ಅನ್ನೋ ಊಹಾಪೋಹಗಳು ಕೇಳಿ ಬರುತ್ತಲೇ ಇದೆ. ಹೀಗಿರುವಾಗಲೇ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಅನ್ನೋ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ,

ಈಗಾಗಲೇ ‘ಬಿಗ್ ಬಾಸ್’ನಲ್ಲಿ ಭಾಗವಹಿಸುವಂತೆ ಹೆಚ್. ವಿಶ್ವನಾಥ್ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.  ಅಲ್ಲದೇ ಮಾತಿನ ಮಲ್ಲನಾಗಿರುವ ಅವರು ಬಂದ್ರೆ ಮನರಂಜನೆ ಪಕ್ಕಾ ಅನ್ನೋ ಕಾರಣಕ್ಕೆ ಅವರನ್ನು ಕರೆ ತರೋದಕ್ಕೆ ಸರ್ಕಸ್ ನಡೆಯುತ್ತಿದೆಯಂತೆ.

ಇನ್ನು 2021ರ ಫೆಬ್ರವರಿಗೆ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಲಿದೆ. ಆದರೆ ನಾನು ಹೋಗೋದ್ರ ಬಗ್ಗೆ ‘ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿರುವುದಾಗಿ ತಿಳಿದುಬಂದಿದೆ. ಏಕೆಂದರೆ, ಮೊದಲನೆಯದಾಗಿ‌ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಪ್ಪಿಕೊಂಡರೆ ಮೂರು ತಿಂಗಳು ಶೂಟಿಂಗ್ ಇರುತ್ತದೆ. ಮೂರು ತಿಂಗಳು ಶೂಟಿಂಗ್ ನಲ್ಲಿ ಭಾಗವಹಿಸುವುದಾಗಿ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಇದರ ನಡುವೆ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯಲಿದೆ. ಆದುದರಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕಿದೆ. ಅಲ್ಲದೆ ವಿಶ್ವನಾಥ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಗಿದ್ದಾರೆ.‌ ರಾಜ್ಯದಲ್ಲಿ ಯಾವಾಗ ಬೇಕಾದರೂ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್ರಚನೆ ಆಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ವಿಶ್ವನಾಥ್ ‘ನಿರ್ಧಾರ ತಿಳಿಸಲು ಸ್ವಲ್ಪ ಸಮಯ ಕೊಡಿ’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!