Friday, April 26, 2024
Homeತಾಜಾ ಸುದ್ದಿ58 ನಿಮಿಷದಲ್ಲಿ 46 ತಿನಿಸುಗಳನ್ನು ತಯಾರಿಸಿದ ಬಾಲಕಿ: ವಿಶ್ವದಾಖಲೆ ಬರೆದ ಚೆನ್ನೈನ ಪೋರಿ

58 ನಿಮಿಷದಲ್ಲಿ 46 ತಿನಿಸುಗಳನ್ನು ತಯಾರಿಸಿದ ಬಾಲಕಿ: ವಿಶ್ವದಾಖಲೆ ಬರೆದ ಚೆನ್ನೈನ ಪೋರಿ

spot_img
- Advertisement -
- Advertisement -

ಚೆನ್ನೈ: ಮನೆಗೆ ಅತಿಥಿಗಳು ಬರ್ತಾರೆ ಸಾಕು ಅವರಿಗೆ ಏನು ಮಾಡೋದು ಅಂತಾ ಗೊತ್ತಾಗದೇ ಪರದಾಡ್ತೀವಿ. ಬೇಕಾದಷ್ಟು ಸಮಯವಿದ್ದರೂ ಒಂದೆರಡು ಡಿಶ್ ಮಾಡೋವಷ್ಟು ಹೊತ್ತಿಗೆ ಸುಸ್ತಾಗ್ತೀವಿ.ಆದ್ರೆ ಚೆನ್ನೈನ ಬಾಲಕಿಯೊಬ್ಬಳು ಕೇವಲ 58 ನಿಮಿಷದಲ್ಲಿ 46 ತಿನಿಸುಗಳನ್ನು ತಯಾರಿಸಿ ಯುನಿಕೊ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದಾಳೆ.

ಎನ್.ಎಸ್. ಲಕ್ಷ್ಮಿ ಸಾಯಿ ಶ್ರೀ ಎಂಬ ಚೆನ್ನೈನ ಈ ಬಾಲಕಿ ಪಟಾ ಪಟ್ ಎಂದು ಅಡುಗೆ ತಯಾರಿಸಿ ನಿನ್ನೆ ವಿಶ್ವ ದಾಖಲೆ ಬರೆದಿದ್ದಾಳೆ. ವಿಶ್ವ ದಾಖಲೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಲಕ್ಷ್ಮಿ, “ನನಗೆ ಅಡುಗೆ ಮಾಡುವುದರಲ್ಲಿ ತುಂಬಾ ಆಸಕ್ತಿಯಿತ್ತು. ಲಾಕ್ ಡೌನ್ ಸಮಯದಲ್ಲಿ ಅಮ್ಮನಿಂದ ಅಡುಗೆ ಮಾಡಲು ತರಬೇತಿ ಪಡೆದೆ. ಅಪ್ಪ ನನಗೆ ಈ ರೀತಿ ದಾಖಲೆ ಸೃಷ್ಟಿಸುವ ಹುಮ್ಮಸ್ಸು ತುಂಬಿದರು” ಎಂದಿದ್ದಾಳೆ.

ತಮಿಳುನಾಡಿನ ಹಲವು ಬಗೆಯ ಸಾಂಪ್ರದಾಯಿಕ ಅಡುಗೆಗಳನ್ನು ನಾನು ಮಾಡುತ್ತೇನೆ. ಲಾಕ್ ಡೌನ್ ಸಮಯದಲ್ಲಿ ನನ್ನೊಂದಿಗೆ ನನ್ನ ಮಗಳು ಅಡುಗೆ ಮನೆಯಲ್ಲಿ ಸಮಯ ಕಳೆಯುತ್ತಿದ್ದಳು. ನಾನು ಆಕೆಗೆ ಅಡುಗೆ ಮಾಡುವುದನ್ನು ಕಲಿಸಿದೆ. ನನ್ನ ಪತಿ, ಅಡುಗೆ ಕಲೆಯಲ್ಲಿ ದಾಖಲೆ ಮಾಡುವ ಆಲೋಚನೆ ನೀಡಿದರು. ಆಗ ನನ್ನ ಮಗಳು ಅಡುಗೆಯನ್ನು ಆದಷ್ಟು ಬೇಗ ಮಾಡುವಂತೆ ತರಬೇತಿ ಪಡೆದುಕೊಂಡು ಈಗ ದಾಖಲೆ ಸೃಷ್ಟಿಸಿದ್ದಾಳೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಲಕ್ಷ್ಮಿ ತಾಯಿ ಎನ್ ಕಲೈಮಗಲ್.

ದಾಖಲೆ ರೂಪಿಸಲು ಮನಸ್ಸು ಮಾಡಿದ ನಂತರ, ಹಿಂದಿನ ದಾಖಲೆಗಳ ಕುರಿತು ಮಾಹಿತಿ ಕಲೆ ಹಾಕಿದರು. ಆಗ ಈಚೆಗೆ ಕೇರಳ ಮೂಲದ ಹತ್ತು ವರ್ಷದ ಬಾಲಕಿ 33 ಆಹಾರಗಳನ್ನು ತಯಾರಿಸಿ ದಾಖಲೆ ಸೃಷ್ಟಿಸಿದ್ದುದು ತಿಳಿದುಬಂತು. ಈ ದಾಖಲೆ ಮುರಿಯಲು ಪ್ರಯತ್ನ ಪಟ್ಟಿದ್ದಾಗಿ ಲಕ್ಷ್ಮಿ ತಿಳಿಸಿದ್ದಾಳೆ.

ಆಗಸ್ಟ್ 29ರಂದು ಕೇರಳದ ಸಾನ್ವಿ 33 ಬಗೆಯ ಆಹಾರ ತಯಾರಿಸಿದ್ದಳು. ಇಡ್ಲಿ, ವೇಫಲ್, ಕಾರ್ನ್ ಫ್ರಿಟರ್, ಮಶ್ರೂಮ್ ಟಿಕ್ಕಾ, ಉತ್ತಪ್ಪಂ, ಪನೀರ್ ಟಿಕ್ಕಾ, ಸ್ಯಾಂಡ್ ವಿಚ್, ಪಾಪಡ್ ಚಾಟ್, ಫ್ರೈಡ್ ರೈಸ್, ಚಿಕನ್ ರೋಸ್ಟ್, ಪ್ಯಾನ್ ಕೇಕ್, ಅಪ್ಪಂ ಹೀಗೆ ಥರಾವರಿ ಭಕ್ಷ್ಯಗಳನ್ನು ತಯಾರಿಸಿದ್ದಳು.

- Advertisement -
spot_img

Latest News

error: Content is protected !!