Sunday, May 19, 2024
Homeಕರಾವಳಿಮಂಗಳೂರಿನಲ್ಲಿ 'ಲಸ್ಸಿ ಎನ್ ಕೆಫೆ' ಫಾಸ್ಟ್ ಫುಡ್ ಉಪಾಹಾರ ಗೃಹ ಉದ್ಘಾಟನೆ

ಮಂಗಳೂರಿನಲ್ಲಿ ‘ಲಸ್ಸಿ ಎನ್ ಕೆಫೆ’ ಫಾಸ್ಟ್ ಫುಡ್ ಉಪಾಹಾರ ಗೃಹ ಉದ್ಘಾಟನೆ

spot_img
- Advertisement -
- Advertisement -

ಮಂಗಳೂರು: ಹೆಸರಾಂತ ಫಾಸ್ಟ್ ಫುಡ್ ಫ್ರ್ಯಾಂಚೈಸ್ `ಲಸ್ಸಿ ಎನ್ ಕೆಫೆ’ ತನ್ನ ಈ ಪ್ರದೇಶದ ಮೊದಲ ಉಪಾಹಾರ ಗ್ರಹವನ್ನು ಮಂಗಳೂರು ಪಾಂಡೇಶ್ವರ ಮೆಜೆಸ್ಟಿಕ್ ಟವರ್ನ (ಪೈ ಸೇಲ್ಸ್ ಎದುರು) ತೆರೆದಿದೆ. ಮಂಗಳೂರು ದಕ್ಷಿಣದ ಶಾಸಕ ಶ್ರೀ ಡಿ.ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಿ.ನಾಗರಾಜ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಮಂಗಳೂರು ನಗರಪಾಲಿಕೆ ಕಾರ್ಪೊರೇಟರ್ ಗಳಾದ ಶ್ರೀ ಪ್ರೇಮಾನಂದ ಶೆಟ್ಟಿ ಮತ್ತು ಶ್ರೀ ಅಬ್ದುಲ್ ಲತೀಫ್, ಮತ್ತು ಪಾಂಡೇಶ್ವರ ಶ್ರೀ ಎಂ. ಮೊಯ್ದೀನ್ ಉಸ್ಮಾನ್ ಕಂದಕ್ ಗೌರವ ಅತಿಥಿಗಳಾಗಿದ್ದರು.

ಕಿರಣ್ ಅಂಡ್ ಕಿರಣ್ ಕಾರ್ಪೊರೇಷನ್ `ಲಸ್ಸಿ ಎನ್ ಕೆಫೆ’ ಮಂಗಳೂರು ಘಟಕದ ಸ್ಥಳೀಯ ಫ್ರಾಂಚೈಸಿ. 1995 ರಿಂದ ಪಿಎಂಎಫ್ಎಸ್ ಬ್ರಾಂಡ್ ಅಡಿಯಲ್ಲಿ ಬ್ಯಾಂಕಿಂಗ್ ಮತ್ತು ವಿಮೆಯಲ್ಲಿ ಸಲಹಾ ಕ್ಷೇತ್ರದಲ್ಲಿ ತೊಡಗಿರುವ ಭಾಸ್ಕರ್ ಕಿರಣ್ ಅವರು ಸಂಸ್ಥೆಯ ಮಾಲೀಕರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಡಿ.ವೇದವ್ಯಾಸ್ ಕಾಮತ್, ಮಂಗಳೂರು ಸ್ಮಾರ್ಟ್ ಸಿಟಿ ಯಾಗುವುದರೊಂದಿಗೆ ಉತ್ತಮ ಗುಣಮಟ್ಟದ ಆಹಾರ ಮಳಿಗೆಗಳ ಅವಶ್ಯಕತೆಯಿದೆ ಎಂದು ಹೇಳಿದರು. ಅವರು ಫ್ರಾಂಚೈಸಿಗಳನ್ನು ಅಭಿನಂದಿಸಿದರು ಮತ್ತು ಅವರಿಗೆ ಯಶಸ್ಸನ್ನು ಹಾರೈಸಿದರು. ಹೆಸರಾಂತ ಫ್ರ್ಯಾಂಚೈಸ್ ಅನ್ನು ಮಂಗಳೂರಿಗೆ ತರುವಲ್ಲಿ ಕೈಗೊಂಡಿರುವ ಸಾಹಸವನ್ನು ಶ್ರೀ ಬಿ.ನಾಗರಾಜ್ ಶೆಟ್ಟಿ ಶ್ಲಾಘಿಸಿದರು.

2017 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ಲಸ್ಸಿ ಎನ್ ಕೆಫೆ' ಭಾರತದ ಪ್ರಮುಖ ಲಸ್ಸಿ ಫ್ರ್ಯಾಂಚೈಸ್ ಗಳಲ್ಲಿ ಒಂದಾಗಿದ್ದು, ವಿದೇಶದಲ್ಲಿಯೂ ಅಸ್ತಿತ್ವ ಹೊಂದಿದೆ. ಇದು ಈಗಾಗಲೇ ದುಬೈ, ಅಬುಧಾಬಿ, ಕತಾರ್, ಒಮಾನ್ ಮತ್ತು ಮಲೇಷ್ಯಾದಲ್ಲಿ, ಬೆಂಗಳೂರು, ಮೈಸೂರು, ನವದೆಹಲಿ, ಮರ್ಗಾವ್, ಹೈದರಾಬಾದ್, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಮಳಿಗೆಗಳನ್ನು ಹೊಂದಿದೆ. ನಿರಂತರ ಶ್ರಮ ಮತ್ತು ಸಂಶೋಧನೆಯೊಂದಿಗೆ ಎಲ್ಲಾ ವಯಸ್ಸಿನ ಜನರಿಗೆ ಸೇವೆ ಸಲ್ಲಿಸುವಲಸ್ಸಿ ಎನ್ ಕೆಫೆ’ 120+ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತದೆ. ಲಸ್ಸಿ ಮತ್ತು ಸ್ಮೂಥಿಗಳಲ್ಲದೆ, ಮಳಿಗೆಯಲ್ಲಿ ಮಾಕ್ಟೇಲ್ಸ್ ಮತ್ತು ಫ್ರೆಶ್ ಜ್ಯೂಸ್, ಐಸ್ ಕ್ರೀಮ್ ಮತ್ತು ಫಲೂಡಾ, ಹಾಟ್ ಡ್ರಿಂಕ್ಸ್, ಬರ್ಗರ್ ಮತ್ತು ಸ್ನ್ಯಾಕ್ ಗಳು ಲಭ್ಯವಿರುತ್ತವೆ. ಸಸ್ಯಾಹಾರಿ ಮತ್ತು ಮಾಂಸಾಹಾರಿಗಳನ್ನು ಒಳಗೊಂಡಿದೆ. ಲಸ್ಸಿ ಎನ್ ಕೆಫೆ' ಕಾರ್ವಾರ್ ಗ್ರೂಪ್ ಗೆ ಸೇರಿರುವ ಸಂಸ್ಥೆಯಾಗಿದೆ, ಇದು ಆಹಾರ ಮತ್ತು ರಿಟೇಲ್ ಉದ್ಯಮಗಳಲ್ಲಿ 40 ವರ್ಷಗಳ ಅನುಭವವನ್ನು ಹೊಂದಿದೆ ಮತ್ತು ಜನರಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆಗಿ ಮಾರ್ಪಟ್ಟಿದೆ. ಲಸ್ಸಿ ಎನ್ ಕೆಫೆ’ಯ ಉದ್ಘಾಟನೆಯ ಸಂದರ್ಭದಲ್ಲಿ, ಭಾಸ್ಕರ್ ಕಿರಣ್ ಅವರು ಸ್ಥಾಪಿಸಿದ ಚಾರಿಟೇಬಲ್ ಟ್ರಸ್ಟ್ `ಪ್ರೀತಿ ಕಿರಣ್ ಫೌಂಡೇಶನ್’ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆರ್ಥಿಕ ನೆರವು ನೀಡಲಾಯಿತು. ಮುಖ್ಯ ಅತಿಥಿ ಶ್ರೀ ನಾಗರಾಜ ಶೆಟ್ಟಿ ಅವರು ಚೆಕ್ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಲಸ್ಸಿ ಎನ್ ಕೆಫೆ' ಸಂಸ್ಥಾಪಕ ಶಹೀದ್, ಕೆಡಬ್ಲ್ಯುಆರ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಫೀಕ್ ಕಾರ್ವಾರ್, ಮಂಗಳೂರು ದಕ್ಷಿಣ ಮಾರುಕಟ್ಟೆ ವ್ಯವಸ್ಥಾಪಕ ಆಸಿಫ್ ಅಬ್ದುಲ್ಲಾ ಮತ್ತುಲಸ್ಸಿ ಎನ್ ಕೆಫೆ’ ಕುಟುಂಬ ಸದಸ್ಯ ಮನ್ಸೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಾಸ್ಕರ್ ಕಿರಣ್ ಸ್ವಾಗತಿಸಿದರು. ಮಹೇಶ್ ನಾಯಕ್ ಕಲ್ಲಚ್ಚು ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -
spot_img

Latest News

error: Content is protected !!