- Advertisement -
- Advertisement -
ಮುಂಬೈ:ಹಲವು ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿ ಕೆಲಸ ಕಳೆದುಕೊಂಡವರಿಗೆ ಇ-ರಿಕ್ಷಾ ನೀಡುವ ಮೂಲಕ ಸೋನು ಸೂದ್ ಅವರ ಬದುಕಿಗೆ ನೆರವಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋನು ಸೂದ್, ‘ಖುದ್ ಕಾಮಾವ್, ಘರ್ ಚಲಾವ್’ ಎಂದು ಬರೆದುಕೊಂಡಿದ್ದಾರೆ. ಅವರು ದುಡಿದು ಆ ಮೂಲಕ ಸ್ವತಃ ಸಂಪಾದಿಸಿ, ಕುಟುಂಬ ನಿರ್ವಹಿಸಿ ಎಂದು ಹೇಳಿದ್ದಾರೆ.ಜನರಿಗೆ ಅಗತ್ಯ ವಸ್ತುಗಳನ್ನು ಹಂಚುವ ಬದಲು ಅವರಿಗೆ ಉದ್ಯೋಗ ನೀಡುವುದು ಇನ್ನೂ ಉತ್ತಮ. ಹಾಗಾಗಿ ಇ-ರಿಕ್ಷಾಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ.ಎಂದು ಪ್ರತಿಕ್ರಿಯೆ ನೀಡಿದ್ದಾರೆ
- Advertisement -