Friday, June 5, 2026
Homeಕರಾವಳಿಕಾಸರಗೋಡಿನ ಯುವತಿಗೆ ವಂಚಿಸಲು ಯತ್ನ: ಆರೋಪಿಯ ಬಂಧನ

ಕಾಸರಗೋಡಿನ ಯುವತಿಗೆ ವಂಚಿಸಲು ಯತ್ನ: ಆರೋಪಿಯ ಬಂಧನ

- Advertisement -
- Advertisement -

ಕಾಸರಗೋಡುಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನಿಸಿದಾತನನ್ನು ಕಾಸರಗೋಡಿನ ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೊಲ್ಲಂಪಾಡಿಯ ಅಬ್ದುಲ್ ಖಾದರ್ (31) ಎಂದು ಗುರುತಿಸಲಾಗಿದೆ. ಬಂಧಿತ ಅಬ್ದುಲ್ ಖಾದರ್ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳಿಗೆ ಪರಿಚಯವಾಗಿದ್ದ. ಆಕೆಯ ಸ್ನೇಹ ಬೆಳೆಸಿ ಖಾಸಗಿ ಫೋಟೋವನ್ನು ಪಡೆದುಕೊಂಡಿದ್ದ.

ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವುದಾಗಿ ಬೆದರಿಸಿದ್ದ. ಅಲ್ಲದೇ ಆರೋಪಿಯು 25 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಯುವತಿಯು ವಿದ್ಯಾನಗರ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಬ್ದುಲ್ ಖಾದರ್‌ನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!