Tuesday, July 1, 2025
Homeತಾಜಾ ಸುದ್ದಿಮದುವೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ವಾಹನ ಬಾವಿಗೆ ಬಿದ್ದು 6 ಜನ ಸಾವು

ಮದುವೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ವಾಹನ ಬಾವಿಗೆ ಬಿದ್ದು 6 ಜನ ಸಾವು

spot_img
- Advertisement -
- Advertisement -

ಮಹಾರಾಜಪುರ: ಮಧ್ಯಪ್ರದೇಶದ ಛತ್ತರ್​ಪುರ ಜಿಲ್ಲೆಯ ಮಹಾರಾಜಪುರದಲ್ಲಿ ಮದುವೆ ಮೆರವಣಿಗೆ ವಾಹನ ಬಾವಿಗೆ ಬಿದ್ದ ಪರಿಣಾಮ 6 ಜನರು ಸಾವಿಗೀಡಾಗಿರುವ ದುರ್ಘಟನೆ ನಡೆದಿದೆ.

ಮಹಾರಾಜಪುರದ ಕುಟುಂಬವೊಂದರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶದ ಮಹೋಬಾದ ಸ್ವಾಸಾ ಗ್ರಾಮದಿಂದ ಸಂಬಂಧಿಕರು ಮೆರವಣಿಗೆ ಬಂದಿದ್ದರು. ಈ ವೇಳೆ ಈ ಅವಘಡ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್​ ಸಹಾಯದಿಂದ ಬಾವಿಗೆ ಬಿದ್ದಿದ್ದ ವಾಹನವನ್ನು ಮೇಲೆತ್ತಿ ಶವಗಳನ್ನು ಹೊರತೆಗೆದಿದ್ದಾರೆ. ಇನ್ನೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -
spot_img

Latest News

error: Content is protected !!