Friday, June 5, 2026
Homeತಾಜಾ ಸುದ್ದಿಕೊಡಗಿನಲ್ಲಿ ಪಾಳು ಬಾವಿಗೆ ಬಿದ್ದು ಸಾವನ್ನಪ್ಪಿದ ಹುಲಿ

ಕೊಡಗಿನಲ್ಲಿ ಪಾಳು ಬಾವಿಗೆ ಬಿದ್ದು ಸಾವನ್ನಪ್ಪಿದ ಹುಲಿ

- Advertisement -
- Advertisement -

ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ಪಾಳುಬಾವಿಗೆ ಬಿದ್ದು ಹುಲಿಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀಮಂಗಲದಲ್ಲಿರುವ ಕೂರ್ಗ್ ಗೆಸ್ಟ್​ಹೌಸ್ ಬಳಿಯಿರುವ ಪಾಳುಬಾವಿಗೆ ಬಿದ್ದು ಹುಲಿ ಸಾವನ್ನಪ್ಪಿದೆ.

ಹುಲಿ ಸುಮಾರು ನಾಲ್ಕು ದಿನಗಳ ಹಿಂದೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಾವಿ ಸುಮಾರು 15 ಅಡಿ‌ ಆಳವಿರುವ ಹಿನ್ನೆಲೆಯಲ್ಲಿ ಹುಲಿ ಅದರಲ್ಲಿ ಸಿಲುಕಿ ಹೊರಬರಲಾಗದೆ ಸಾವನ್ನಪ್ಪಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು, ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!