- Advertisement -
![]()
- Advertisement -
ಪುಣೆ: ಕೆಲವು ದಿನಗಳ ಹಿಂದೆ ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ ಭಕ್ತರು ಭಾರತೀಯ ಸಂಸ್ಕೃತಿಯಂತೆ ವಸ್ತ್ರ ಧರಿಸಿ ಬರಬೇಕೆಂದು ಬೋರ್ಡ್ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಆಕ್ರೋಶ ವ್ಯಕ್ತ ಪಡಿಸಿದ್ದು ಅರ್ಚಕರಿಗಿಲ್ಲದ ವಸ್ತ್ರ ಸಂಹಿತೆ ಭಕ್ತರಿಗೆ ಮಾತ್ರ ಏಕೆ ಎಂದು ಪ್ರಶ್ನಿಸಿದ್ದಾರೆ.
ತೃಪ್ತಿ ದೇಸಾಯಿ ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಶಿರಡಿ ದೇವಾಲಯ ಇಂತಹ ಬೋರ್ಡ್ ಗಳನ್ನು ಹಾಕುವ ಮೂಲಕ ಭಕ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ . ದೇವಾಲಯ ಟ್ರಸ್ಟ್ ಈ ಫಲಕಗಳನ್ನು ತೆಗೆಯದಿದ್ದರೇ ನಾವೇ ಶಿರಡಿಗೆ ಹೋಗಿ ಫಲಕಗಳನ್ನು ತೆಗೆದು ಹಾಕುವುದಾಗಿ ತಿಳಿಸಿದ್ದಾರೆ.ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಸಿಇಓ, ಇದೊಂದು ಮನವಿ ಅಷ್ಟೇ, ಆದೇಶವಾಗಿ ಜಾರಿಗೆ ಬಂದಿಲ್ಲ ಎಂದು ತಿಳಿಸಿದರು.
- Advertisement -


