Friday, June 26, 2026
Homeಕರಾವಳಿತುರ್ತು ಚಿಕಿತ್ಸೆಗಾಗಿ ಪುತ್ತೂರನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಸಾಗಿದ ಆಂಬುಲೆನ್ಸ್

ತುರ್ತು ಚಿಕಿತ್ಸೆಗಾಗಿ ಪುತ್ತೂರನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಸಾಗಿದ ಆಂಬುಲೆನ್ಸ್

- Advertisement -
- Advertisement -

ಪುತ್ತೂರು: ಶ್ವಾಸಕೋಶದ ತುರ್ತು ಶಸ್ತ್ರಚಿಕಿತ್ಸೆಗಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಸಕಲೇಶಪುರದ ಅರೇಹಳ್ಳಿ ಮೂಲದ ಸುಹನಾ (22 ವರ್ಷ) ಎಂಬಾಕೆಯನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ವೈದೇಹಿ ಆಸ್ಪತ್ರೆಗೆ ಇಂದು ಬೆಳಿಗ್ಗೆ 11 ಘಂಟೆಗೆ ಪುತ್ತೂರಿನಿಂದ ಬೆಂಗಳೂರಿಗೆ ಕೆಎಂಸಿಸಿ ಆಂಬುಲೆನ್ಸ್ ನಲ್ಲಿ ಎಮರ್ಜೆನ್ಸಿ ಅಲರ್ಟ್ ಮೂಲಕ ಕರೆದೊಯ್ಯಲಾಯಿತು.

ಪುತ್ತೂರಿನಿಂದ ಹೊರಟ ಆಂಬುಲೆನ್ಸ್ , ಉಪ್ಪಿನಂಗಡಿ, ಗುರುವಾಯನಕೆರೆ, ಉಜಿರೆ, ಚಾರ್ಮಾಡಿ ಮಾರ್ಗವಾಗಿ ಸಾಗಿ ಬಂಕಲ್ ಹ್ಯಾಂಡ್ ಪೋಸ್ಟ್ – ಗೋಣಿಬೀಡು – ಬೇಲೂರು – ಹಾಸನ – ಯಶವಂತುರ – ಹೆಬ್ಬಾಳ – ರಾಮಮೂರ್ತಿನಗರ – ಟಿನ್ ಫ್ಯಾಕ್ಟರಿ – ಮಹದೇವಪುರ – ವೈದೇಹಿ ಆಸ್ಪತ್ರೆ ತಲುಪಲಿದೆ.

ಪುತ್ತೂರು ಸಂಚಾರ ಪೊಲೀಸರು ನಗರ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ನ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಈಗಾಗಲೇ ಚಾರ್ಮಾಡಿ ಪಾಸ್ ಆಗಿರುವ ಆಂಬುಲೆನ್ಸ್ ಗೆ ರಸ್ತೆಯಲ್ಲಿ ಆಯಾ ಊರಿನ ನಾಗರಿಕರು ಹಾಗೂ ಸಂಘಟನೆಗಳ ಕಾರ್ಯಕರ್ತರು ಆಂಬುಲೆನ್ಸ್ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.

- Advertisement -

Latest News

error: Content is protected !!