- Advertisement -
![]()
- Advertisement -
ತಣ್ಮೀರುಪಂತ: ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಸಮೀಪದ ಹುಣಸೆಕಟ್ಟೆ ಎಂಬಲ್ಲಿ ಬೈಕ್ ಮತ್ತು ಮಹಿಂದ್ರಾ ಪಿಕಪ್ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿ ಮೃತಪಟ್ಟ ದಾರುಣ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಉಪ್ಪಿನಂಗಡಿ ಕಡೆ ಹೋಗುತ್ತೀದ್ದ ಪಿಕಪ್ ವಾಹನ ಪದ್ಮಂಜ ಕಡೆಗೆ ಬರುತ್ತಿದ್ಧ, ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ

ಶರವೇಗದಲ್ಲಿ ಬರುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರಾದ ಉರುವಾಲು ಸುಂಟಿ ಪಲಿಕೆ ನಿವಾಸಿ ಕೃಷ್ಣಪ್ರಸಾದ್ ಶೆಟ್ಟಿ(36) ಹಾಗೂ ಕಾಣಿಯೂರಿನ ಜಯಾನಂದ ಗೌಡ (28) ಎಂಬವರು ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪಿಕಪ್ ವಾಹನದ ಚಾಲಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕೊಯ್ಯುರು ಸಮೀಪದ ಸಂದೇಶ್ ಎಂದು ತಿಳಿದುಬಂದಿದೆ.
- Advertisement -


