Wednesday, June 3, 2026
Homeತಾಜಾ ಸುದ್ದಿನಿತೀಶ್ ಕುಮಾರ್ ಗೆಲ್ಲಲು ವಿಚಿತ್ರ ಹರಕೆ- ಸಿಎಂ ಆದಾಗೆಲ್ಲಾ ಬೆರಳನ್ನು ಗೌರೆಯಾ ಬಾಬಾಗೆ ಅರ್ಪಿಸಿದ ಹುಚ್ಚು...

ನಿತೀಶ್ ಕುಮಾರ್ ಗೆಲ್ಲಲು ವಿಚಿತ್ರ ಹರಕೆ- ಸಿಎಂ ಆದಾಗೆಲ್ಲಾ ಬೆರಳನ್ನು ಗೌರೆಯಾ ಬಾಬಾಗೆ ಅರ್ಪಿಸಿದ ಹುಚ್ಚು ಅಭಿಮಾನಿ!..

- Advertisement -
- Advertisement -

ಬಿಹಾರ: ನಿತೀಶ್ ಕುಮಾರ್ ಗೆದ್ದು ಮುಖ್ಯಮಂತ್ರಿ ಯಾಗಬೇಕೆಂಬ ಹಂಬಲ ದಿಂದ ಅಭಿಮಾನಿಯೊಬ್ಬ ಬೆರಳನ್ನೇ ಹರಕೆಯಾಗಿ ಅರ್ಪಿಸಿದ್ದಾನೆ.ಹುಚ್ಚು ಅಭಿಮಾನಿಯೊಬ್ಬ ತನ್ನ ನಾಯಕ ಗೆದ್ದ ಖುಷಿಗೆ ತನ್ನ ಕೈಗಳ ಬೆರಳುಗಳನ್ನು ಒಂದೊಂದಾಗೇ ಗೌರೆಯಾ ಬಾಬಾಗೆ ಬಲಿ ನೀಡಿದ್ದಾನೆ.ಈ ವ್ಯಕ್ತಿ ಈ ಬಾರಿಯ ನಿತೀಶ್ ಕುಮಾರ್ ಗೆಲುವಿಗೆ ನವೆಂಬರ್ 16ರಂದು ತನ್ನ ನಾಲ್ಕನೇ ಬೆರಳನ್ನೂ ಅರ್ಪಿಸಿದ್ದಾನೆ.

ಅನಿಲ್ ಕುಮಾರ್ ಶರ್ಮಾ ಎಂಬ ವ್ಯಕ್ತಿ ಗೌರೆಯಾ ಬಾಬಾ ಬಳಿ ನಿತೀಶ್ ಕುಮಾರ್ ಗೆದ್ದು ಮುಖ್ಯಮಂತ್ರಿಯಾದರೆ ತನ್ನ ಒಂದು ಬೆರಳು ಬಲಿಯಾಗಿ ನೀಡುತ್ತೇನೆಂದು ಹರಕೆ ಹೊತ್ತುಕೊಂಡಿದ್ದ. ನಿತೀಶ್ ಕುಮಾರ್ ಸಿಎಂ ಆದಾಗೆಲ್ಲಾ ಈ ವ್ಯಕ್ತಿ ತನ್ನ ಒಂದು ಬೆರಳನ್ನು ಗೌರೆಯಾ ಬಾಬಾಗೆ ಅರ್ಪಿಸುತ್ತಾ ಬಂದಿದ್ದಾನೆ.ಅಲ್ಲದೆ ಸಿಎಂ ನಿತೀಶ್‌ ಕುಮಾರ್‌ರನ್ನು ಖುದ್ದು ಭೇಟಿಯಾಗುವ ಅವಕಾಶ ಸಿಗುವುದಿಲ್ಲವೋ ಅಲ್ಲಿಯವರೆಗೆ ತಾನು ಚಿಕಿತ್ಸೆ ಪಡೆಯುವುದಿಲ್ಲ ಎಂದು ಹೇಳುತ್ತಿರುವ ಈತನ ವಿಚಿತ್ರ ಅಭಿಮಾನ ಕಂಡು ಜನ ನಿಬ್ಬೆರಗಾಗಿದ್ದರೆ.

- Advertisement -

Latest News

error: Content is protected !!