Tuesday, April 30, 2024
Homeತಾಜಾ ಸುದ್ದಿನಾಳೆ ಶಾಲಾರಂಭದ ಕುರಿತು ಮಹತ್ವದ ಸಭೆ- ಮುಖ್ಯಮಂತ್ರಿ ನೇತೃತ್ವದಲ್ಲಿ ಒಮ್ಮತದ ನಿರ್ದಾರ!..

ನಾಳೆ ಶಾಲಾರಂಭದ ಕುರಿತು ಮಹತ್ವದ ಸಭೆ- ಮುಖ್ಯಮಂತ್ರಿ ನೇತೃತ್ವದಲ್ಲಿ ಒಮ್ಮತದ ನಿರ್ದಾರ!..

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಮುಂದೂಡತ್ತಲೇ ಬಂದಿದೆ. ಈ ಕುರಿತಾಗಿ ನಾಳೆ ಮಹತ್ವದ ಸಭೆಯೊಂದು ನಡೆಯಲಿದ್ದು ಬಳಿಕ ನಿರ್ಧಾರ ಹೊರಬೀಳಲಿದೆ. ವಿಧಾನಸೌಧದಲ್ಲಿ ಸೋಮವಾರ ಮಧ್ಯಾಹ್ನ 12.30 ಕ್ಕೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಶಾಲೆ ಆರಂಭದ ಕುರಿತು ಚರ್ಚಿಸಲು ಸಭೆ ನಡೆಸಲು ತಯಾರಿ ನಡೆದಿದೆ.

ಶಿಕ್ಷಣ ಸಚಿವರು, ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದು, ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ದೊರೆತಿದೆ. ಈಗಾಗಲೇ ಡಿಸೆಂಬರ್ 2 ನೇ ವಾರದಿಂದ ಎಸ್‌ಎಸ್‌ಎಲ್ಸಿ, ಸೆಕೆಂಡ್ ಪಿಯುಸಿ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಆಯುಕ್ತರು ಶಿಫಾರಸು ಮಾಡಿದ್ದಾರೆ. ಪೋಷಕರು, ತಜ್ಞರು, ಅಧಿಕಾರಿಗಳು, ಶಿಕ್ಷಕರು, ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.

- Advertisement -
spot_img

Latest News

error: Content is protected !!